ಆಸ್ಪತ್ರೆಯಲ್ಲಿದ್ದಾಗ ನವಾಲ್ನಿಯ ಆಸ್ತಿಗಳ ಮುಟ್ಟುಗೋಲು: ವಕ್ತಾರೆ ಹೇಳಿಕೆ

Update: 2020-09-25 14:41 GMT

ಮಾಸ್ಕೊ (ರಶ್ಯ), ಸೆ. 25: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಜರ್ಮನಿಯ ಆಸ್ಪತ್ರೆಯೊಂದರಲ್ಲಿ ಸಾವು-ಬದುಕಿನ ಹೋರಾಟದಲ್ಲಿದ್ದಾಗ, ರಶ್ಯದ ನ್ಯಾಯಾಲಯವೊಂದು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ ಎಂದು ಅವರ ವಕ್ತಾರೆ ಗುರುವಾರ ಹೇಳಿದ್ದಾರೆ.

ಮಾಸ್ಕೋ ಉಪನಗರದಲ್ಲಿರುವ ಫ್ಲ್ಯಾಟ್ ಒಂದರಲ್ಲಿ ಅವರು ಹೊಂದಿರುವ ಪಾಲಿನಲ್ಲಿ ಯಾವುದೇ ವ್ಯವಹಾರ ನಡೆಸುವುದನ್ನು ನ್ಯಾಯಾಲಯ ಆಗಸ್ಟ್ 27ರಂದು ನಿಷೇಧಿಸಿದೆ ಎಂದು ವೀಡಿಯೊ ಹೇಳಿಕೆಯೊಂದರಲ್ಲಿ ಭ್ರಷ್ಟಾಚಾರ ವಿರೋದಿ ಹೋರಾಟಗಾರ ನವಾಲ್ನಿಯ ವಕ್ತಾರೆ ಕಿರಾ ಯಾರ್ಮಿಶ್ ವೀಡಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಅಲೆಕ್ಸೀಯ ಬ್ಯಾಂಕ್ ಖಾತೆಗಳನ್ನೂ ಸ್ಥಗಿತಗೊಳಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News