ನಕಲಿ ಪೈಲಟ್ ಪರವಾನಿಗೆ ಹಗರಣ: ಹೊಸ ಪರವಾನಿಗೆ ನೀಡಬೇಡಿ

Update: 2020-09-25 16:11 GMT

ಇಸ್ಲಾಮಾಬಾದ್, ಸೆ. 25: ನಕಲಿ ಪೈಲಟ್ ಪರವಾನಿಗೆ ಹಗರಣಕ್ಕೆ ಸಂಬಂಧಿಸಿ ಆಗಿರುವ ತಪ್ಪನ್ನು ತಕ್ಷಣ ಸರಿಪಡಿಸಿ ಹಾಗೂ ಯಾವುದೇ ಹೊಸ ಪೈಲಟ್ ಪರವಾನಿಗೆ ನೀಡುವುದನ್ನು ನಿಲ್ಲಿಸಿ ಎಂದು ಅಂತರ್‌ರಾಷ್ಟ್ರೀಯ ನಾಗರಿಕ ವಾಯುಯಾನ ಸಂಘಟನೆ (ಐಸಿಎಒ) ಪಾಕಿಸ್ತಾನಕ್ಕೆ ಸಲಹೆ ನೀಡಿದೆ.

ಐಸಿಎಒ ವಿಶ್ವಸಂಸ್ಥೆಯ ಪರಿಣತ ಸಂಸ್ಥೆಯಾಗಿದ್ದು, ಅಂತರ್‌ರಾಷ್ಟ್ರೀಯ ವಾಯು ಸಾರಿಗೆಯ ಸುರಕ್ಷತೆಯನ್ನು ಖಾತರಿಪಡಿಸುತ್ತದೆ.

ನಕಲಿ ಪೈಲಟ್ ಪರವಾನಿಗೆಗಳನ್ನು ಹೊಂದಿರುವುದಕ್ಕಾಗಿ 50 ಪೈಲಟ್‌ಗಳು ಮತ್ತು ಅವರಿಗೆ ನಕಲಿ ಪರವಾನಿಗೆಗಳನ್ನು ಪಡೆಯಲು ನೆರವು ನೀಡಿರುವುದಕ್ಕಾಗಿ ಐವರು ನಾಗರಿಕ ವಾಯುಯಾನ ಅಧಿಕಾರಿಗಳ ವಿರುದ್ಧ ಪಾಕಿಸ್ತಾನವು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು ವಿಚಾರಣೆ ನಡೆಯುತ್ತಿದೆ.

 ‘‘ಪಾಕಿಸ್ತಾನ ತನ್ನ ಪರವಾನಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ಅವ್ಯವಹಾರಗಳನ್ನು ತಡೆಯುವುದಕ್ಕಾಗಿ ಹೊಸ ಪೈಲಟ್ ಪರವಾನಿಗೆಗಳನ್ನು ನೀಡುವ ಮುನ್ನ ಎಲ್ಲ ಅಗತ್ಯ ಪ್ರಕ್ರಿಯೆಗಳು ಮತ್ತು ವಿಧಾನಗಳನ್ನು ಅನುಸರಿಸಬೇಕು’’ ಎಂದು ಪಾಕಿಸ್ತಾನ ನಾಗರಿಕ ವಾಯುಯಾನ ಪ್ರಾಧಿಕಾರಕ್ಕೆ ಕಳೆದ ವಾರ ಬರೆದ ಪತ್ರವೊಂದರಲ್ಲಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News