ಪ್ರಧಾನಿ ಮೋದಿ ಕೂಡ ನನ್ನ ಪುತ್ರನೇ: ಬಿಲ್ಕಿಸ್

Update: 2020-09-25 17:45 GMT

ಹೊಸದಿಲ್ಲಿ: ಪ್ರಧಾನಿ ಮೋದಿ ಅವರು ಕೂಡ ನನ್ನ ಪುತ್ರನೇ. ಆಹ್ವಾನ ನೀಡಿದರೆ, ನಾನು ಅವರನ್ನು ಭೇಟಿಯಾಗಲು ಸಿದ್ಧ ಎಂದು ‘ಶಾಹೀನ್ ಬಾಗ್ ದಾದಿ’ ಎಂದು ಜನಪ್ರಿಯರಾಗಿರುವ ಬಿಲ್ಕೀಸ್ ಶುಕ್ರವಾರ ಹೇಳಿದ್ದಾರೆ.

ಆಹ್ವಾನ ನೀಡಿದರೆ, ಪ್ರಧಾನಿ ಅವರನ್ನು ಭೇಟಿಯಾಗಲು ನೀವು ಹೋಗುತ್ತೀರಾ ? ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ  ಬಿಲ್ಕೀಸ್, ‘‘ಯಾಕೆ ಭೇಟಿಯಾಗಬಾರದು? ಅದರಲ್ಲಿ ಭಯ ಪಡುವಂತದ್ದು ಏನಿದೆ?’’ ಎಂದು ಅವರು ಪ್ರಶ್ನಿಸಿದರು. ಮೋದಿ ಅವರನ್ನು ಭೇಟಿಯಾಗಲು ಅವಕಾಶ ನೀಡಿದರೆ, ನಿಮ್ಮ ಸಂಕಷ್ಟಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೀರಾ ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಅವರು ನನ್ನ ಪುತ್ರನಂತೆ. ನಾನು ಅವರ ತಾಯಿಯಂತೆ. ನಾನು ಅವರಿಗೆ ಜನ್ಮ ನೀಡಿಲ್ಲ. ನನ್ನ ಸಹೋದರಿ ಅವರಿಗೆ ಜನ್ಮ ನೀಡಿದರು. ಅವರು ನನ್ನ ಮಗುವಿನಂತೆ ಎಂದು ಹೇಳಿದ್ದಾರೆ. ಟೈಮ್ ಮ್ಯಾಗಝಿನ್‌ನ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಒಳಗೊಂಡಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದು ಬಿಲ್ಕಿಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News