×
Ad

ಅಗಲಿದ ಎಸ್ಪಿ ಬಾಲಸುಬ್ರಮಣ್ಯಂ ನುಡಿನಮನ

Update: 2020-09-25 22:25 IST

ಉಡುಪಿ, ಸೆ.25: ನಗರದ ಮಾರುತಿ ವಿಥೀಕಾದಲ್ಲಿ ಇಂದು ಎಸ್ಪಿ ಹಾಡಿರುವ ಗ್ರಾಮೋಫೋನ್ ಬಳಸಿ ಹಾಗೂ ಕಲಾವಿದರ ಜೊತೆಗೂಡಿ ಎಸ್.ಪಿ.ಬಾಲ ಸುಬ್ರಹ್ಮಣ್ಯ ಹಾಡಿರುವ ಹಾಡುಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸ ಲಾಯಿತು.

ಸಮಾಜ ಸೇವಕರಾದ ಕಿನ್ನಿಮುಳ್ಕಿ ಕೃಷ್ಣಮೂರ್ತಿ ಆಚಾರ್ಯ ದೀಪ ಬೆಳಗಿಸಿ ಎಸ್ಪಿಬಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಾಯಕ ರಾದ ದಿನೇಶ್ ಕೊಡುವೂರು, ಸುಬ್ರಮಣ್ಯ ಪಾಡಿಗಾರ ಗುರುರಾಜ್ ಆಚಾರ್ಯ ಸಂತೆಕಟ್ಟೆ ಸುಶೀಲನ್, ಹರೀಶ್ ನಿಟ್ಟೂರು ಮೊದಲಾ ದವರು ಎಸ್ಪಿಬಿ ಹಾಡಿನೊಂದಿಗೆ ಶ್ರದ್ದಾಂಜಲಿ ಅರ್ಪಿಸಿದರು.

ಮಾರುತಿ ವೀಥೀಕಾದ ಗಣೇಶೋತ್ಸವದ ಅಧ್ಯಕ್ಷ ಗುರುರಾಜ್ ಶೆಟ್ಟಿ, ದಿನೇಶ್ ನಾಗರಾಜ್ ನಾಯಕ್, ರಾಜೇಶ್ ಕಲ್ಮಾಡಿ ಸುನಿಲ್ ಶೇಟ್, ಉದಯ ಕುಮಾರ್, ಮುದ್ದು ಶೇರಿಗಾರ್, ಡಾ.ಲಕ್ಷ್ಮಿ ಪ್ರಕಾಶ್ ಭಟ್, ಎಸ್.ಜಿ. ಭಟ್ ಸುಧಾಕರ್ ಸೇರಿಗಾರ್, ಪ್ರಸನ್ನ ರಾಜ್, ರಾಮನಾಥ್ ನಾಯಕ್, ಇಂದ್ರಾಳಿ, ಅನಂತರಾಮ್ ಪೈ, ಗಣೇಶ್ ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News