ಮಾಸ್ಕ್ ಧರಿಸದವರಿಂದ 13,400ರೂ. ದಂಡ ವಸೂಲಿ

Update: 2020-09-25 17:00 GMT

ಉಡುಪಿ, ಸೆ. 25: ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಕೋವಿಡ್ -19 ನಿಯಮ ಉಲ್ಲಂಘಿಸಿದವರಿಂದ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 13,400ರೂ. ದಂಡ ವಸೂಲಿ ಮಾಡ ಲಾಗಿದೆ.

ಸೆ.25ರಂದು ಸ್ಥಳೀಯಾಡಳಿತ ಸಂಸ್ಥೆಗಳಾದ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 700ರೂ., ಕಾರ್ಕಳ ಪುರಸಭೆ- 5200ರೂ., ಕುಂದಾಪುರ ಪುರಸಭೆ- 2600 ರೂ., ಕಾಪು ಪುರಸಭೆ- 2600ರೂ., ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 500ರೂ. ಸೇರಿದಂತೆ ಒಟ್ಟು 11600ರೂ. ದಂಡ ವಸೂಲಿ ಮಾಡಲಾಗಿದೆ.

ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಉಡುಪಿ- 200ರೂ., ಕಾರ್ಕಳ-200 ರೂ., ಕುಂದಾಪುರ- 500ರೂ., ಕಾಪು-200ರೂ., ಬ್ರಹ್ಮಾವರ- 400ರೂ., ಬೈಂದೂರು- 300ರೂ. ಸೇರಿದಂತೆ ಒಟ್ಟು 1800ರೂ. ದಂಡ ಶುಲ್ಕ ವಿಧಿಸ ಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 2,68,500ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News