ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರಶಸ್ತಿ

Update: 2020-09-25 17:06 GMT

ಶಿರ್ವ, ಸೆ.25: ಬಂಟಕಲ್ಲಿನ ಶ್ರೀಮಧ್ವವಾದಿರಾಜ ತಾಂತ್ರಿಕ ವಿದ್ಯಾಲಯದ ಯಾಂತ್ರಿಕ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ವಿಕಲಚೇತನರ ವಾಹನದಲ್ಲಿ ಹಿಮ್ಮುಖ ಚಾಲನೆಗೆ ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ್ದಾರೆ.

ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ರವಿನಾರಾಯಣ್ ಆರ್.ರಾವ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಧನುಷ್, ಅಭಿಷೇಕ್, ಅಶ್ವಿನ್ ಮತ್ತು ದೀಪಕ್ ಆಚಾರ್, ಈ ಪ್ರಾಜೆಕ್ಟ್‌ನಲ್ಲಿ ಬ್ಯಾಟರಿ ಚಾಲಿತ ಮೋಟಾರ್ ಅಳವಡಿಸಿದ್ದು, ವಿಕಲಚೇತನರು ವಾಹನ ನಿಲುಗಡೆ ಪ್ರದೇಶದಲ್ಲಿ ಯಾರ ಸಹಾಯವು ಇಲ್ಲದೆ ತಮ್ಮ ವಾಹನವನ್ನು ಹಿಮ್ಮುಖವಾಗಿ ಚಲಿಸಬಹುದಾಗಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳು ಈ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಿದ್ದು, ಈ ಪ್ರಾಜೆಕ್ಟ್‌ಗೆ ಕೆಎಸ್‌ಸಿಎಸ್‌ಟಿಯ 2020ರ ಅತ್ಯುತ್ತಮ ಪಾಜೆಕ್ಟ್ ಪ್ರಶಸ್ತಿ ದೊರೆತಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News