ಅ. 7: ಬ್ಯಾರಿ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ

Update: 2020-09-25 17:21 GMT

ಮಂಗಳೂರು, ಸೆ. 25: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2018ರ ಗೌರವ ಪ್ರಶಸ್ತಿಗೆ ಪಾತ್ರರಾದ ಖಾಲಿದ್ ತಣ್ಣೀರುಬಾವಿ (ಬ್ಯಾರಿ ಕಲೆ), ಝುಲೇಖಾ ಮುಮ್ತಾಝ್ (ಬ್ಯಾರಿ ಸಾಹಿತ್ಯ), ನೂರ್ ಮುಹಮ್ಮದ್ (ಬ್ಯಾರಿ ಜಾನಪದ), 2019ರ ಗೌರವ ಪ್ರಶಸ್ತಿಗೆ ಪಾತ್ರರಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು (ಬ್ಯಾರಿ ಸಾಹಿತ್ಯ), ಇಸ್ಮಾಯಿಲ್ ತಣ್ಣೀರುಬಾವಿ (ಬ್ಯಾರಿ ಕಲೆ), ಎಂ. ಅಹ್ಮದ್ ಬಾವಾ ಮೊಹಿದಿನ್ (ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ), 2020ರ ಗೌರವ ಪ್ರಶಸ್ತಿಗೆ ಪಾತ್ರರಾದ ಬಶೀರ್ ಅಹ್ಮದ್ ಕಿನ್ಯ (ಬ್ಯಾರಿ ಸಾಹಿತ್ಯ), ವೀಣಾ ಮಂಗಳೂರು (ಬ್ಯಾರಿ ಸಿನಿಮಾ, ನಾಟಕ, ಕಲೆ), ಸಿದ್ದೀಕ್ ಮಂಜೇಶ್ವರ (ಬ್ಯಾರಿ ಸಂಘಟನೆ ಮತ್ತು ಸಮಾಜಸೇವೆ) ಅವರಿಗೆ ಅ.7ರಂದು ಬೆಂಗಳೂರಿನ ಕಲಾ ಗ್ರಾಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

12 ಮಂದಿಗೆ ಗೌರವ ಪುರಸ್ಕಾರ

2018ರ ಪುರಸ್ಕಾರಕ್ಕೆ ಪಾತ್ರರಾದ ವಿ. ಮುಹಮ್ಮದ್ (ಜೀವರಕ್ಷಕ), ಉಮ್ಮರ್ ಹಾಜಿ ಬೆಂಗಳೂರು (ಸಮಾಜಸೇವೆ), 2019ರ ಪುರಸ್ಕಾರಕ್ಕೆ ಪಾತ್ರರಾದ ಅಬ್ದುಲ್ ರಝಾಕ್ ಅನಂತಾಡಿ (ಬ್ಯಾರಿ ಶಿಕ್ಷಣ), ಟಿ.ಎಸ್. ಹುಸೈನ್ (ಬ್ಯಾರಿ ಸಾಹಿತ್ಯ), ಅಬ್ದುಲ್ ಮಜೀದ್ ಸೂರಲ್ಪಾಡಿ (ಬ್ಯಾರಿ ಸಂಯುಕ್ತ ಕ್ಷೇತ್ರ), ಆಪತ್ಭಾಂದವ ಆಸಿಫ್ ಕಾರ್ನಾಡ್ (ಸಮಾಜ ಸೇವೆ), ಆಲಿಕುಂಞಿ ಪಾರೆ (ಬ್ಯಾರಿ ಸಂಘಟನೆ), 2020ರ ಪುರಸ್ಕಾರಕ್ಕೆ ಪಾತ್ರರಾದ ಡಾ. ಇಸ್ಮಾಯಿಲ್ (ವೈದ್ಯಕೀಯ), ಟಿ.ಎ. ಮೊಹಮ್ಮದ್ ಆಸಿಫ್ (ಶಿಕ್ಷಣ), ಇಲ್ಯಾಸ್ ಮಂಗಳೂರು (ಸಮಾಜ ಸೇವೆ), ರಾಶ್ ಬ್ಯಾರಿ (ಬ್ಯಾರಿ ಸಂಘಟನೆ), ಸಫ್ವಾನ್ ಶಾ ಬಹರೈನ್ (ಬ್ಯಾರಿ ಯುವ ಪ್ರತಿಭೆ) ಅವರಿಗೂ ಈ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬ್ಯಾರಿ ಲಿಪಿ-ಶಬ್ದಕೋಶ ರಚನೆಕಾರರಿಗೆ ಸನ್ಮಾನ

ಬ್ಯಾರಿ ಲಿಪಿ ರಚನೆಕಾರರಾದ ಅಬ್ದುಲ್ ರಶೀದ್ ಝೈನಿ ಸಖಾಫಿ ಅಲ್ ಕಾಮಿಲ್, ಡಾ. ಅಬೂಬಕ್ಕರ್ ಸಿದ್ದೀಕ್, ಹೈದರಾಲಿ, ಅಬ್ದುಲ್ ರಝಾಕ್ ಅನಂತಾಡಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಎ.ಕೆ. ಕುಕ್ಕಿಲ, ಹಂಝ ಮಲಾರ್, ಅಬ್ದುಲ್ ಸಮದ್ ಬಾವ, ಡಾ. ಮುಹಮ್ಮದ್ ಫೌಸೀದ್ ಅವರಿಗೆ ಮತ್ತು ಬ್ಯಾರಿ-ಕನ್ನಡ-ಹಿಂದಿ-ಇಂಗ್ಲಿಷ್-ಐಪಿಎ ಶಬ್ಧಕೋಶದ ರಚನಾಕಾರರಿಗೂ ಸನ್ಮಾನ ನಡೆಯಲಿದೆ.

ಗೌರವ ಪ್ರಶಸ್ತಿಯು ನಗದು 50,000 ರೂ., ಗೌರವ ಪುರಸ್ಕಾರವು 10,000 ರೂ.ವನ್ನು ಒಳಗೊಂಡಿದೆ. ಅಕಾಡಮಿಯ ವತಿಯಿಂದ ಅಂದು ದಫ್, ಕೋಲ್ಕಲಿ, ಒಪ್ಪನ, ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News