ಕಾಸರಗೋಡು: 268 ಮಂದಿಗೆ ಕೊರೋನ ಪಾಸಿಟಿವ್

Update: 2020-09-25 17:38 GMT

ಕಾಸರಗೋಡು : ಜಿಲ್ಲೆಯಲ್ಲಿ ಶುಕ್ರವಾರ 268 ಮಂದಿಗೆ ಕೊರೋನ  ಪಾಸಿಟಿವ್ ದೃಢಪಟ್ಟಿದ್ದು , ಸಂಪರ್ಕ ಮೂಲಕ 257 ಮಂದಿಗೆ ಸೋಕು ತಗುಲಿದೆ. ಇತರ ರಾಜ್ಯಗಳಿಂದ ಬಂದ 7 ಮಂದಿಗೆ, ವಿದೇಶಗಳಿಂದ ಆಗಮಿಸಿದ 4 ಮಂದಿಗೆ ಸೋಂಕು  ಪತ್ತೆಯಾಗಿದೆ . 107 ಮಂದಿ ಗುಣಮುಖರಾಗಿದ್ದಾರೆ  ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಈ  ತನಕ ಒಟ್ಟು 9415 ಮಂದಿಗೆ ಪಾಸಿಟಿವ್  ಆಗಿದ್ದು, ಈ ಪೈಕಿ 8209 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 686 ಮಂದಿ ವಿದೇಶಗಳಿಂದ, 520 ಮಂದಿ ಇತರ ರಾಜ್ಯಗಳಿಂದ ಬಂದವರು. 7278 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಈಗ 2065 ಮಂದಿ ಜಿಲ್ಲೆಯಲ್ಲಿ  ಚಿಕಿತ್ಸೆಯಲ್ಲಿದ್ದಾರೆ. 1046 ಮಂದಿ ಸ್ವ ಮನೆಗಳಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.  72 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 3948 ಮಂದಿ ನಿಗಾದಲ್ಲಿದ್ದಾರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News