ಟ್ರಂಪ್ ವಿರುದ್ಧ ಅಣ್ಣನ ಮಗಳಿಂದ ನ್ಯಾಯಾಲಯದಲ್ಲಿ ಮೊಕದ್ದಮೆ

Update: 2020-09-25 17:42 GMT

ವಾಶಿಂಗ್ಟನ್, ಸೆ. 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಣ್ಣನ ಮಗಳು ಮೇರಿ ಟ್ರಂಪ್ ಗುರುವಾರ ಟ್ರಂಪ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ನನಗೆ ಪಿತ್ರಾರ್ಜಿತ ಆಸ್ತಿಯಿಂದ ಬರಬೇಕಾಗಿದ್ದ ಮಿಲಿಯಗಟ್ಟಳೆ ಡಾಲರ್ ಹಣವನ್ನು ಟ್ರಂಪ್ ಮತ್ತು ಇತರ ಕುಟುಂಬ ಸದಸ್ಯರು ವಂಚಿಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಡೊನಾಲ್ಡ್ ಟ್ರಂಪ್, ಅವರ ಸಹೋದರಿ ಮರ್ಯಾನ್ ಟ್ರಂಪ್ ಬಾರಿ ಮತ್ತು ಆಗಸ್ಟ್‌ನಲ್ಲಿ ನಿಧನರಾಗಿರುವ ಟ್ರಂಪ್ ಸಹೋದರ ರಾಬರ್ಟ್ ಟ್ರಂಪ್‌ರ ಎಸ್ಟೇಟ್ ವಿರುದ್ಧ ಮೇರಿ ಟ್ರಂಪ್ ಮ್ಯಾನ್‌ಹಟನ್‌ನ ನ್ಯೂಯಾರ್ಕ್ ರಾಜ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಅವರೆಲ್ಲರೂ ನನ್ನ ವಿರುದ್ಧ ಪಿತೂರಿ ಹೂಡಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರು ಈಗಾಗಲೇ ಟ್ರಂಪ್ ಬಗ್ಗೆ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಟ್ರಂಪ್‌ರನ್ನು ವಂಚಕನಾಗಿ ಬಿಂಬಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News