ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಎಸ್‌ಡಿಪಿಐ ವತಿಯಿಂದ ದ.ಕ.ಜಿಲ್ಲಾದ್ಯಂತ ಧರಣಿ

Update: 2020-09-25 17:42 GMT

ಮಂಗಳೂರು : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿದ ರೈತ ಮತ್ತು ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಯನ್ನು ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ದ.ಕ. ಜಿಲ್ಲಾದ್ಯಂತ ಶುಕ್ರವಾರ ಧರಣಿ ನಡೆಸಿತು.

ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ, ಬೆಳ್ಳಾರೆ, ಸವಣೂರು, ಅಂಕತ್ತಡ್ಕ, ಪುತ್ತೂರು ವಿಧಾನಸಭಾ ಕ್ಷೇತ್ರದ  ಕಬಕ, ಕುಂಬ್ರ, ಆರ್ಯಾಪು, ಪುರುಷರಕಟ್ಟೆ, ವಿಟ್ಲ, ಉಪ್ಪಿನಂಗಡಿ, ಪುಣಚ, ಕಡಬ ತಾಲೂಕಿನ ಕಡಬ, ನೆಲ್ಯಾಡಿ,ರಾಮುಕುಂಜ,ಕೊಯಿಲ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಸಿ ರೋಡ್, ಸಜಿಪಮೂಡ,ವಿಟ್ಲ ಪಡ್ನೂರು,ಕಲ್ಲಡ್ಕ, ಕಾವಲ್ ಮುಡೂರು, ಇರ್ವತ್ತೂರು, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಜ್ಪೆ ಮತ್ತು ಮುಲ್ಕಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಲಾಯಿಲ, ಮಡಂತ್ಯಾರ್, ಪುದುವೆಟ್ಟು, ಕುವೆಟ್ಟು, ನೆರಿಯಾ, ನಾವೂರು, ಕುದ್ರಡ್ಕ, ಧರ್ಮಸ್ಥಳ, ತೆಕ್ಕಾರ್, ಮಳವಂತಿಗೆ, ಮಿತ್ತಬಾಗಿಲು, ಇಂದಬೆಟ್ಟು ನಲ್ಲಿ ಪ್ರತಿಭಟನೆ ನಡೆಯಿತು.

ಉಳ್ಳಾಲ ವಿಧಾನಸಭಾ ಕ್ಷೇತ್ರದ ಪುದು ಫರಂಗಿಪೇಟೆ, ಉಳ್ಳಾಲ, ತಲಪಾಡಿ, ಹರೇಕಳ, ಕಿನ್ಯಾ, ಬೋಳಿಯಾರ್, ಸಜಿಪ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಉಳಾಯಿಬೆಟ್ಟು, ಮೂಡುಶೆಡ್ಡೆ, ಮಲ್ಲೂರು, ಸುರತ್ಕಲ್, ಕಾವೂರು,ಅಡ್ಯಾರ್ ಆರ್ಕುಳ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಗಳೂರು ತಾಲೂಕು ಕಚೇರಿ ಸೇರಿದಂತೆ ಸುಮಾರು 50 ಕ್ಕೂ ಅಧಿಕ ಕಡೆಗಳಲ್ಲಿ ಧರಣಿ ನಡೆಸಲಾಯಿತು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ನಾಯಕರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರಾಷ್ಟ್ರಪತಿ ಮಧ್ಯಪ್ರವೇಶ ಮಾಡಿ ತಡೆಯಾಜ್ಞೆ ತಂದು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಧರಣಿಯ ಬಳಿಕ ಅಯಾ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಹಶಿಲ್ದಾರ್, ಜಿಲ್ಲಾಧಿಕಾರಿಯ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ರಾಜ್ಯ, ಜಿಲ್ಲಾ, ವಿಧಾನಸಭಾ ಕ್ಷೇತ್ರದ ಮತ್ತು ಸ್ಥಳೀಯ ಗ್ರಾಮ ಮಟ್ಟದ ನಾಯಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News