ವಿಶ್ವ ಹೃದಯ ದಿನ : ಸೆ.28-29: ಹೃದಯ ತಪಾಸಣಾ ಶಿಬಿರ

Update: 2020-09-25 17:45 GMT

ಮಂಗಳೂರು, ಸೆ.25: ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ತೊಕ್ಕೊಟ್ಟು ಓವರ್ ಬ್ರಿಡ್ಜ್‌ನ ಬ್ರಿಡ್ಜ್ ಬೇ ನ ಮೆಡಾಕ್ ಪಾಲಿಕ್ಲಿನಿಕ್‌ನಲ್ಲಿ ಸೆ.28 ಮತ್ತು 29ರಂದು ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಇಸಿಜಿ, ಬಿಪಿ, ಬಿಎಂಐ, ಬ್ಲಡ್ ಶುಗರ್ ಪರೀಕ್ಷೆ ಸಹಿತ ಹೃದಯರೋಗ ತಜ್ಞರ ಸಲಹೆಗಳನ್ನು ಉಚಿತವಾಗಿ ಪಡೆಯಬಹುದು. 2ಡಿ ಏಕೋ+ಲಿಪಿಡ್ ಪ್ರೊಫೈಲ್ ಕೇವಲ 1,299 ರೂ.ನಲ್ಲಿ ದೊರೆಯಲಿದೆ.

40 ವರ್ಷ ಮೀರಿದವರಿಗೆ ಹೃದಯ ತಪಾಸಣೆ ಶಿಫಾರಸು ಮಾಡಲಿದ್ದೇವೆ. ನೋಂದಣಿಗಾಗಿ 8686212103/06ನ್ನು ಸಂಪರ್ಕಿಸಬಹುದು. ಕೊರೋನ ಸಮಯದಲ್ಲಿ ಆಸ್ಪತ್ರೆಗೆ ಭೇಟಿ ನೀಡಲು ಆಗದವರಿಗೆ ಚಿಕಿತ್ಸೆ ಪಡೆಯಲು ಈ ಶಿಬಿರವು ಬಹಳ ಸಹಾಯಕವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News