ಕೃಷಿ ವಿಧೇಯಕ ವಿರೋಧಿಸಿ ಬೀದಿಗೆ ಇಳಿದಿರುವ ಪಂಜಾಬ್ ರೈತರ ಹಸಿವು ನೀಗಿಸಿದ ಮುಸ್ಲಿಮ್ ಯುವಕರು

Update: 2020-09-26 07:51 GMT

Photo: Facebook (Shyam Meera Singh)
 

ಹೊಸದಿಲ್ಲಿ, ಸೆ.25: ಪಂಜಾಬ್ ನಗರದ ಮಲೆರ್ಕೋಟ್ಲಾ ಪಟ್ಟಣದಲ್ಲಿ ಕೇಂದ್ರದ ಕೃಷಿ ವಿಧೇಯಕವನ್ನು ವಿರೋಧಿಸಿ ಸಿಖ್ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಸಿಖ್ ರೈತರ ಹಸಿವು ಹಾಗೂ ಬಾಯಾರಿಕೆ ನೀಗಿಸುವ ಜವಾಬ್ದಾರಿಯನ್ನು ಮುಸ್ಲಿಮ್ ಯುವಕರು ವಹಿಸಿಕೊಂಡಿದ್ದು, ಈ ಮಾನವೀಯತೆಯ ನಡೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಸಾವಿರಾರು ಮುಸ್ಲಿಮ್ ಮಹಿಳೆಯರು ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಪಂಜಾಬ್ ನ ಸಿಖ್ಖರು ರಸ್ತೆಯಲ್ಲಿ ಲಂಗರು ಹಾಕಿ ಬೆಂಬಲ ನೀಡಿದ್ದರು. ಇದೀಗ ರೈತ ಚಳುವಳಿಯ ಸಮಯದಲ್ಲಿ ಮುಸ್ಲಿಮರು ಸಿಖ್ಖರಿಗೆ ಬೆಂಬಲ ನೀಡುತ್ತಿದ್ದಾರೆ.

"ಶಾಹಿನ್ ಬಾಗ್ ನಲ್ಲಿ ಸಿಎಎ ಹಾಗೂ ಎನ್ ಆರ್ ಸಿ ವಿರುದ್ಧ ಪ್ರತಿಭಟಿಸುತ್ತಿದ್ದ ಸಾವಿರಾರು ಮಹಿಳೆಯರಿಗೆ ಪಂಜಾಬ್ ನಿಂದ ಬಂದ ರೈತರು ಬೆಂಬಲ ನೀಡಿದ್ದರು. ಇದೀಗ ಮಲೆರ್ಕೋಟ್ಲಾದ ಮುಸ್ಲಿಮ್ ಯುವಕರು ಪ್ರತಿಭಟನಾ ನಿರತ ಪಂಜಾಬ್ ರೈತರಿಗೆ ಆಹಾರವನ್ನು ವಿತರಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇಂತಹ ಪ್ರೀತಿಯ ಬಂಧವು ನಮ್ಮನ್ನೆಲ್ಲ ಕಟ್ಟಿಹಾಕಿದೆ. ಭಾರತ ಸುರಕ್ಷಿತವಾಗಿದೆ" ಎಂದು ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News