ಕೊಣಾಜೆ : ಒಂಟಿ ಮಹಿಳೆಯ ಮೃತದೇಹ ಪತ್ತೆ, ಕೊಲೆ ಶಂಕೆ

Update: 2020-09-26 09:18 GMT

ಕೊಣಾಜೆ : ಪೊಲೀಸ್ ಠಾಣೆ ವ್ಯಾಪ್ತಿಯ ಹೂ ಹಾಕುವ ಕಲ್ಲು ಸಮೀಪದ ಬೆಳ್ಳೇರಿಯ ಮನೆಯಲ್ಲಿ ಅವಿವಾಹಿತ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಅತ್ಯಾಚಾರವೆಸಗಿ ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ನಿವಾಸಿ ಕುಸುಮ (53) ಮೃತರು ಎಂದು ಗುರುತಿಸಲಾಗಿದೆ. 

ಅಡಿಕೆ ತೋಟ ಹೊಂದಿರುವ ಮಹಿಳೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸ್ಥಳೀಯರ ಪ್ರಕಾರ ಮಹಿಳೆ ಹೆಚ್ಚಾಗಿ ಯಾರ ಜೊತೆಗೂ ಬೆರೆಯುತ್ತಿರಲಿಲ್ಲ. ಮನೆಯ ಸಿಟ್ ಔಟ್ ನಲ್ಲಿ ಮೊಬೈಲ್ ಮತ್ತು ಕನ್ನಡಕ ಇತ್ತೆನ್ನಲಾಗಿದ್ದು, ಕಿಟಕಿ ಬಾಗಿಲು ತೆರೆದಿದ್ದು ಅಡುಗೆ ಕೋಣೆ ಬಳಿಯ ಬಾಗಿಲು ಒಳಗಡೆಯಿಂದಲೇ ಮುಚ್ಚಲಾಗಿತ್ತು ಎನ್ನಲಾಗಿದೆ.

ಮಹಿಳೆಯ ಸಹೋದರ ಕರೆ ಮಾಡಿದಾಗ ಫೋನ್ ರಿಸೀವ್ ಮಾಡದಿರುವುದರಿಂದ ಕೆಲಸಗಾರ್ತಿ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಮನೆ ಕೆಲಸಕ್ಕೆ ಬರುವ ಮಹಿಳೆಯ ಹೇಳಿಕೆಯ ಆಧಾರದಲ್ಲಿ ತನಿಖೆ ಮುಂದುವರಿದಿದೆ. ಕಳ್ಳತನಕ್ಕೆ ಬಂದಿರುವವರು ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News