ಪಂಜಾಬ್‌ನಲ್ಲಿ ತೀವ್ರಗೊಂಡ ರೈತರ ಚಳವಳಿ; 28 ರೈಲು ಸಂಚಾರ ಸ್ಥಗಿತ

Update: 2020-09-26 09:54 GMT

ಚಂಡೀಗಡ,ಸೆ.26: ಮೂರು ವಿವಾದಾತ್ಮಕ ಕೃಷಿವಿಧೇಯಕಗಳ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಪಂಜಾಬ್ ರೈತರು ತಮ್ಮ ರೈಲ್ ರೋಕೊ ಆಂದೋಲನವನ್ನು ಸೆಪ್ಟಂಬರ್ 29ರ ತನಕ ವಿಸ್ತರಿಸಿದ್ದಾರೆ. ನಾವು ಪ್ರತಿಪಕ್ಷಗಳಿಂದ ದಾರಿ ತಪ್ಪುತ್ತಿಲ್ಲ ಎಂದು ಪ್ರತಿಭಟನಾನಿರತ ರೈತರು ಹೇಳಿದ್ದಾರೆ.

"ನಮ್ಮನ್ನು ಪ್ರತಿಪಕ್ಷಗಳು ಪ್ರಚೋದಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೂಷಿಸುತ್ತಿದ್ದಾರೆ. ಇದು ಸರಿಯಲ್ಲ. ನಾವು ಸುಗ್ರೀವಾಜ್ಞೆಯನ್ನು(ಈಗ ವಿಧೇಯಕವಾಗಿದೆ)ಓದಿದ್ದೇವೆ. ಇಂತಹ ಬದಲಾವಣೆಗಳನ್ನು ಮಾಡಲು ಪಿಎಂ ಮೋದಿಗೆ ಕಾರ್ಪೊರೇಟ್‌ಗಳು ಒತ್ತಡ ಹಾಕಿದ್ದಾರೆ. ದೇಶಾದ್ಯಂತ ರೈತರ ಬೆಂಬಲವನ್ನು ನಾವು ಪಡೆಯುತ್ತಿದ್ದೇವೆ. ಇದು ಜನರ ದೊಡ್ಡ ಚಳವಳಿಯಾಗಿದೆ. ಅವರು ಮಸೂದೆಗಳನ್ನು ರದ್ದುಪಡಿಸಬೇಕಾಗುತ್ತದೆ. ಈ ಬದಲಾವಣೆಯನ್ನು ಈ ನೆಲದಲ್ಲಿ ತರಲು ಸಾಧ್ಯವಾಗದು'' ಎಂದು ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿಯ ರಾಜ್ಯ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಾಂಧೇರ್ ಹೇಳಿದ್ದಾರೆ.

ಪ್ರತಿಭಟನೆಯ ಸಮಯದಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ ಎಂದು ಪಾಂಧರ್ ಹೇಳಿದ್ದಾರೆ.

ಮೂರನೇ ದಿನದ ರೈಲ್ ರೋಕೊದಲ್ಲಿ ಆಂದೋಲನದ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ರೈಲು ತಡೆ ಮುಂದುವರಿದಿದ್ದು, ಕನಿಷ್ಠ 28 ಪ್ರಯಾಣಿಕ ರೈಲುಗಳನ್ನು ರದ್ದುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News