ಬೇಕಲ್ ಉಸ್ತಾದ್ ಅಗಲಿಕೆಯು ಸಾಮಾಜಿಕ ಸೇವಾ ಕ್ಷೇತ್ರವನ್ನು ಕುಂದಿಸಿದೆ: ಸುಲೈಮಾನ್ ಕಲ್ಲರ್ಪೆ

Update: 2020-09-26 10:33 GMT

ಮಂಗಳೂರು : ಹಿರಿಯ ವಿದ್ವಾಂಸ, ಸಮುದಾಯದ ಮತ್ತು ಸಮಾಜದಲ್ಲಿನ  ಸೇವೆಯಲ್ಲಿ ತನ್ನನ್ನು ಗುರುತಿಸಿಕೊಂಡಿದ್ದ ಖಾಝಿ ಬೇಕಲ್ ಉಸ್ತಾದ್ ಅವರ ನಿಧನವು, ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ, ಒಟ್ಟು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆಯೆಂದು ವೆಲ್ಫೇರ್ ಪಾರ್ಟಿ ಆಪ್  ಇಂಡಿಯಾ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಹೇಳಿದರು.

ಬೇಕಲ್ ಉಸ್ತಾದರವರ  ಸಮಾಜಮುಖಿ ಕೆಲಸಕಾರ್ಯಗಳು ಯಾವುದೇ ನಿರ್ದಿಷ್ಟ ವರ್ಗಕ್ಕೆ, ಸೀಮಿತವಾಗಿರದೆ ಮಾನವೀಯ ನೆಲೆಯಿಂದ ಕೂಡಿದ್ದವು. ಮಾತ್ರವಲ್ಲ ಆದರ ಕಾರ್ಯಕ್ಷೇತ್ರವು ಕೂಡಾ, ಯಾವುದೇ ಮಸೀದಿ, ಮೊಹಲ್ಲಾದಲ್ಲಿನ ಪ್ರದೇಶಕ್ಕೆ ಮುಗಿಯದೆ ಎಲ್ಲೆಡೆಯಲ್ಲಿಯೂ ಅವರು ತಮ್ಮ ಕ್ರಿಯಾ ಯೋಜನೆಯನ್ನು ಹೊಂದಿದ್ದರು. ತಮ್ಮ ಅಧೀನ ಸಂಘಟನೆಗಳ ಕಾರ್ಯಕರ್ತರಿಗೆ  ಸಮಾಜದ ಸೇವಾರಂಗದಲ್ಲಿ ಕ್ರಿಯಾಶೀಲರಾಗಿರಲು ಅವರು ಪ್ರೇರಣೆಯಾಗಿದ್ದರು, ಇನ್ನು ಮುಂದೆಯೂ ಇಷ್ಟೊಂದು ಅವರ ಸಾಮಾಜಿಕ ಧ್ಯೇಯೋದ್ದೇಶಗಳನ್ನು ಮುಂದುವರಿಸಲು ಎಲ್ಲರೂ ಕಟಿಬದ್ಧರಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News