ಮಂಗಳೂರು: ಧನಲಕ್ಷ್ಮಿಗೆ ಡಾಕ್ಟರೇಟ್ ಪದವಿ

Update: 2020-09-26 12:30 GMT

ಮಂಗಳೂರು, ಸೆ.26: ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಧನಲಕ್ಷ್ಮಿ ಅವರು ಮಂಡಿಸಿದ ಪ್ರೌಢಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ.

‘ವಿವಿಧ ಹಂತದ ಸ್ವಾಭಿಮಾನ ಹೊಂದಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ಜೀವನ ಕೌಶಲಗಳು,ಆಧ್ಯಾತ್ಮಿಕ ಬುದ್ಧಿವಂತಿಕೆ ಹಾಗೂ ಶೈಕ್ಷಣಿಕ ಸಾಧನೆಗಳ ಮೇಲೆ ಜೀವನ ಕೌಶಲ್ಯಗಳನ್ನು ಕಲಿಸುವ ವಿಭಿನ್ನ ವಿಧಾನಗಳ ಪರಿಣಾಮಕಾರಿತ್ವ’ ಈ ವಿಷಯದಲ್ಲಿ ಧನಲಕ್ಷ್ಮಿಯವರು ಪ್ರಬಂಧ ಮಂಡಿಸಿದ್ದು, ಮಂಗಳೂರಿನ ಸೇಂಟ್ ಆನ್ಸ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ವಿಜಯಕುಮಾರಿ ಎಸ್.ಎನ್ ಮಾರ್ಗದರ್ಶಕರಾಗಿದ್ದರು.

ಧನಲಕ್ಷ್ಮಿಯವರು ಮಂಗಳೂರಿನ ಸೇಂಟ್ ಆನ್ಸ್ ಶಿಕ್ಷಣ ಮಹಾವಿದ್ಯಾಲಯ, ಸರ್ಕಾರಿ ಶಿಕ್ಷಕ -ಶಿಕ್ಷಣ ವಿದ್ಯಾಲಯ ಹಾಗೂ ಬಂಟ್ವಾಳದ ಎಸ್.ವಿ.ಎಸ್ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News