×
Ad

ಅಪಘಾತದಲ್ಲಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ಅಂತ್ಯಸಂಸ್ಕಾರ

Update: 2020-09-26 18:15 IST

ಉಡುಪಿ ಸೆ. 26: 15 ದಿನಗಳ ಹಿಂದೆ ಉದ್ಯಾವರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಪತ್ತೆಯಾಗದ ಕಾರಣ ಕಾಪು ಪೋಲಿಸರು ಹಾಗೂ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ ಬೀಡಿನಗುಡ್ಡೆ ರುದ್ರ ಭೂಮಿಯಲ್ಲಿ ಸೆ.25ರಂದು ಆತನ ಅಂತ್ಯ ಸಂಸ್ಕಾರ ನೆರವೆರಿಸಲಾಯಿತು.

ಕಾಪು ಠಾಣಾ ಎಎಸ್ಸೈ ಗೋಪಾಲ ಶೆಟ್ಟಿಗಾರ್ ಹಾಗೂ ಸಿಬ್ಬಂದಿಗಳು ಕಾನೂನು ಪ್ರಕ್ರಿಯೆ ನಡೆಸಿದರು. ಅಂಬ್ಯುಲೆನ್ಸ್ ಚಾಲಕ ಸುಮಂತ್ ಸಹಕರಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News