ಬಿಹಾರದ ಎಂಟು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ

Update: 2020-09-26 13:03 GMT

ಹೊಸದಿಲ್ಲಿ,ಸೆ.26: ಚುನಾವಣಾ ಆಯೋಗವು ಬಿಹಾರ ವಿಧಾನ ಪರಿಷತ್ತಿಗೆ ನಾಲ್ಕು ಪದವೀಧರ ಮತ್ತು ನಾಲ್ಕು ಶಿಕ್ಷಕರ ಕ್ಷೇತ್ರಗಳಿಂದ ದ್ವೈವಾರ್ಷಿಕ ಚುನಾವಣೆಯನ್ನು ಪ್ರಕಟಿಸಿದೆ.

ಈ ಎಲ್ಲ ಮತಕ್ಷೇತ್ರಗಳಿಗೆ ಮತದಾನ ಅ.22ರಂದು ನಡೆಯಲಿದ್ದು,ಮತಗಳ ಎಣಿಕೆಯು ನ.12ರಂದು ನಡೆಯಲಿದೆ. ಹಾಲಿ ಸದಸ್ಯರ ನಿವೃತ್ತಿಯಿಂದಾಗಿ ಈ ಎಂಟು ಕ್ಷೇತ್ರಗಳು ಮೇ 6,2020ರಿಂದ ತೆರವಾಗಿದ್ದವು.

ಆಯೋಗವು ಸೆ.28ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದೆ. ನಾಮಪತ್ರಗಳ ಸಲ್ಲಿಕೆಗೆ ಅ.5 ಕೊನೆಯ ದಿನಾಂಕವಾಗಿದ್ದು, ಅ.6ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂದೆಗೆದುಕೊಳ್ಳಲು ಅ.8 ಕೊನೆಯ ದಿನಾಂಕವಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News