ಕೊರೋನ ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸುವ ಯಾವುದೇ ದೇಶ ಅದನ್ನು ವಿಶ್ವಕ್ಕೆ ಹಂಚಬೇಕು: ಆಸ್ಟ್ರೇಲಿಯ ಪ್ರಧಾನಿ

Update: 2020-09-26 16:05 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 26: ಕೊರೋನ ವೈರಸ್‌ಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ಯಾವುದೇ ದೇಶವು ಅದನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಬೇಕು ಎಂದು ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮೊರಿಸನ್ ಶುಕ್ರವಾರ ಕರೆ ನೀಡಿದ್ದಾರೆ. ಹಾಗೆ ಮಾಡದಿದ್ದರೆ ಇತಿಹಾಸವು ಅವರ ವಿರುದ್ಧ ‘ಕಠಿಣ ತೀರ್ಪು’ ನೀಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಮೊರಿಸನ್ ಈ ಎಚ್ಚರಿಕೆ ನೀಡಿದ್ದಾರೆ. ಆಸ್ಟ್ರೇಲಿಯದ ಐತಿಹಾಸಿಕ ಮಿತ್ರ ದೇಶವಾಗಿರುವ ಅಮೆರಿಕವು, ಲಸಿಕೆಯ ವಿಷಯದಲ್ಲಿ ಸಹಯೋಗ ಏರ್ಪಡಿಸುವ ಜಾಗತಿಕ ಪ್ರಯತ್ನಗಳನ್ನು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಕೆಲವರು ಲಸಿಕೆಯ ವಿಷಯದಲ್ಲಿ ಅಲ್ಪಕಾಲೀನ ಪ್ರಯೋಜನ ಪಡೆದುಕೊಳ್ಳಲು ಅಥವಾ ಲಾಭ ಮಾಡಿಕೊಳ್ಳಲೂ ಪ್ರಯತ್ನಿಸಬಹುದು. ಆದರೆ, ಈ ರೀತಿಯಲ್ಲಿ ಯೋಚಿಸುತ್ತಿರುವವರಿಗೆ ನಾನೊಂದು ಎಚ್ಚರಿಕೆ ನೀಡಬಯಸುತ್ತೇನೆ- ಮಾನವತೆಯು ಅತ್ಯಂತ ಸುದೀರ್ಘ ನೆನಪಿನ ಶಕ್ತಿಯನ್ನು ಹೊಂದಿದೆ ಹಾಗೂ ಅತ್ಯಂತ ಕಠಿಣ ನ್ಯಾಯಾಧೀಶನಂತೆ ಅದು ವರ್ತಿಸಬಹುದು’’ ಎಂದು ವಿಶ್ವಸಂಸ್ಥೆಯಲ್ಲಿ ಪ್ರದರ್ಶಿಸಲಾದ ಪೂರ್ವ ಮುದ್ರಿತ ವೀಡಿಯೊದಲ್ಲಿ ಆಸ್ಟ್ರೇಲಿಯ ಪ್ರಧಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News