ಮತ್ತೆ ತೆರೆಯುತ್ತಿರುವ ಮಂಗಳೂರು ಸೆಂಟ್ರಲ್ ಮಾರ್ಕೆಟ್

Update: 2020-09-27 04:10 GMT

ಮಂಗಳೂರು, ಸೆ.27: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಕೆಲವು ಅಂಗಡಿಗಳು ರವಿವಾರ ಮುಂಜಾನೆಯಿಂದ ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಆದರೆ ಕೇಂದ್ರ ಮಾರ್ಕೆಟ್‌ನ ಮುಖ್ಯ ಗೇಟ್ ಇನ್ನೂ ತೆರೆದಿಲ್ಲ. 

ಸೋಮವಾರದಿಂದ ಮನಪಾ ಅಧಿಕಾರಿಗಳು ವಿದ್ಯುತ್ ಸಂಪರ್ಕ ಮತ್ತು ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿ ಮಾರುಕಟ್ಟೆ ವ್ಯಾಪಾರ ಪುನರಾರಂಭಿಸಲು ಅವಕಾಶ ಮಾಡಿಕೊಡಬಹುದು ಎಂಬ ಆಶಾಭಾವನೆಯನ್ನು ವ್ಯಾಪಾರಿಗಳು ಹೊಂದಿದ್ದಾರೆ. ಈ ಮಧ್ಯೆ ಮಾರುಕಟ್ಟೆಯ ಆಸುಪಾಸಿನ ಬೀದಿಬದಿ, ಪುರಭವನ ಮತ್ತು ಲೇಡಿಗೋಶನ್ ಆಸ್ಪತ್ರೆ ಬಳಿಯ ತಾತ್ಕಾಲಿಕ ಅಂಗಡಿಗಳಲ್ಲೂ ವ್ಯಾಪಾರ ಬಿರುಸು ಪಡೆದಿದೆ.

ಕೆಲದಿನಗಳ ಹಿಂದೆ  ಸೆಂಟ್ರಲ್ ಮಾರುಕಟ್ಟೆಯಲ್ಲಿ ಕಾನೂನುಬದ್ಧ ವ್ಯಾಪಾರ ಚಟುವಟಿಕೆಗೆ ಅನುಮತಿ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದ ಮೇರೆಗೆ ಮಾನ್ಯತೆ ಪಡೆದ ವ್ಯಾಪಾರ ಪರವಾನಿಗೆ ಹೊಂದಿರುವ ವ್ಯಾಪಾರಿಗಳು ವಾಣಿಜ್ಯ ಪರವಾನಿಗೆ ಪತ್ರ, ಗುರುತುಪತ್ರ ಸಹಿತ ಎಲ್ಲಾ ಪುರಾವೆ/ದಾಖಲೆಯೊಂದಿಗೆ ಜೊತೆಗೆ ಮನಪಾ ಆಯುಕ್ತರನ್ನು ಸಂಪರ್ಕಿಸಲು ತಿಳಿಸಿತ್ತು. ಅದರಂತೆ ಹಲವು‌ ವ್ಯಾಪಾರಿಗಳು ದಾಖಲೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News