ವಿ4 ನ್ಯೂಸ್ ಚಾನೆಲ್ ನಲ್ಲಿ ಬೇಕಲ್ ಉಸ್ತಾದರ ಸಂಸ್ಮರಣಾ ಭಾಷಣ

Update: 2020-09-27 10:14 GMT

ಮಂಗಳೂರು, ಸೆ.27: ಇತ್ತೀಚೆಗೆ ನಿಧನರಾದ ಹಿರಿಯ ವಿದ್ವಾಂಸ ಹಾಗೂ ಉಡುಪಿ, ಚಿಕ್ಕಮಗಳೂರು, ಹಾಸನ, ದ.ಕ. ಜಿಲ್ಲೆಗಳ ನೂರಾರು ಮೊಹಲ್ಲಾಗಳ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್  ಅವರ  ಸಂಸ್ಮರಣಾ ಭಾಷಣವು ಸಿಲ್ ಸಿಲಾ ಮೀಡಿಯಾ ವತಿಯಿಂದ  ‘ ವಿ4 ನ್ಯೂಸ್ ‘ ಟಿವಿ ಚಾನೆಲ್ ಹಾಗೂ ‘ಸಿಲ್ ಸಿಲಾ ಮೀಡಿಯಾ’ ಯೂಟ್ಯೂಬ್ ಚಾನೆಲ್ ನಲ್ಲಿ ಸೆ.28 ಮತ್ತು 29ರಂದು ಪ್ರಸಾರವಾಗಲಿದೆ.

ರಾತ್ರಿ  8:30ರಿಂದ  9:30ರ ತನಕ ಪ್ರಸಾರ ಕಾರ್ಯಕ್ರಮದಲ್ಲಿ ಸೆ.28ರಂದು ಎಸ್. ವೈ.ಎಸ್. ರಾಜ್ಯ  ಪ್ರಧಾನ ಕಾರ್ಯದರ್ಶಿ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ  ಹಾಗೂ ಸೆ.29ರಂದು ಸುನ್ನೀ ಜಂ ಇಯ್ಯತುಲ್ ಉಲಮಾದ ರಾಜ್ಯ ಉಪಾಧ್ಯಕ್ಷ 

 ಕೆ.ಸಿ.ರೋಡ್ ಹುಸೈನ್ ಸ-ಅದಿ ಭಾಷಣ ಮಾಡಲಿದ್ದಾರೆ ಎಂದು ಸಿಲ್ ಸಿಲಾ ಮೀಡಿಯಾದ ನಿರ್ದೇಶಕ ಪಿ.ಎಸ್.ತ್ವಾಹ ಸಅದಿ  ಪಾಣೆಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News