ಅಮ್ಮುಂಜೆ: ರಕ್ತದಾನ ಶಿಬಿರ ಹಾಗೂ ಕೊರೋನ ಯೋಧರಿಗೆ ಸನ್ಮಾನ ಕಾರ್ಯಕ್ರಮ

Update: 2020-09-27 11:57 GMT

ಮಂಗಳೂರು, ಸೆ.27: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಆಶ್ರಯದಲ್ಲಿ, ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಸಹಭಾಗಿತ್ವದಲ್ಲಿ ಜಿ.ಸಿ.ಸಿ ಹೆಲ್ಪ್ ಲೈನ್ ಅಮ್ಮುಂಜೆ ಆಯೋಜಿಸಿದ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಕೊರೋನ ಯೋಧರಿಗೆ ಸನ್ಮಾನ ಕಾರ್ಯಕ್ರಮ ಅಮ್ಮುಂಜೆ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಸಿ.ಸಿ ಹೆಲ್ಪ್ ಲೈನ್ ಅಮ್ಮುಂಜೆ ಮರ್ಕಝ್ ನಗರ ಇದರ ಮುಖಂಡ ಅಬ್ದುಲ್ ಮಜೀದ್ ಕೆ. ವಹಿಸಿದ್ದರು. ಅಮ್ಮುಂಜೆ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಕೆ.ಎಂ ಹಾಗೂ ಜಿ.ಸಿ.ಸಿ ಹೆಲ್ಪ್ ಲೈನ್ ಅಮ್ಮುಂಜೆ ಇದರ ಸಲಹೆಗಾರ ಮುಹಿಯುದ್ದೀನ್ ಸಅದಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮನಪಾ ಆರೋಗ್ಯ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಮನಪಾ ಇಂಜಿನಿಯರ್ ಅಬ್ದುಲ್ ಖಾದರ್, ಡಾ.ಇ.ಕೆ.ಇ ಸಿದ್ದೀಕ್ ಅಡ್ಡೂರು, ಆಶಾ ಕಾರ್ಯಕರ್ತೆಯರಾದ ನಳಿನಿ ಸುರೇಶ್ ಜೋಗಿ ಹಾಗೂ ಉಮಾವತಿ ವಿಶ್ವನಾಥ್ ಜೋಗಿ ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ ಒಟ್ಟು 57 ಯುನಿಟ್ ರಕ್ತ ಸಂಗ್ರಹವಾಯಿತು. 

ಜಿ.ಸಿ.ಸಿ ಹೆಲ್ಪ್ ಲೈನ್ ಅಮ್ಮುಂಜೆ ಸದಸ್ಯರಾದ ಸಿದ್ದೀಕ್ ಬಾಕಿಮಾರ್ ಸ್ವಾಗತಿಸಿ, ಅಬ್ದುಲ್ ಹಕೀಮ್ ಧನ್ಯವಾದ ಸಮರ್ಪಿಸಿದರು. ಅಶ್ಫಕ್ ಎ.ಎಚ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News