ಬಜ್ಪೆ ತಡೆಗೋಡೆ ಕುಸಿತ : ಎಸ್ ಡಿ ಪಿ ಐ ಯಿಂದ ತೆರವು ಕಾರ್ಯಾಚರಣೆ

Update: 2020-09-27 14:08 GMT

ಬಜ್ಪೆ : ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಜ್ಪೆ ಗ್ರಾಮ ಸಮಿತಿಯ ವತಿಯಿಂದ ಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಗಾರ್ ಪ್ರದೇಶದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಮಳೆನೀರು ಹರಿದು ಹೋಗಲು ಕಾಲುವೆ (ಚರಂಡಿ) ಇತ್ತೀಚಿಗೆ ಸುರಿದ ಧಾರಾಕಾರ ಮಳೆಗೆ ಕುಸಿದು ಸಮೀಪದ ಮನೆಗೆ ಹಾನಿ ಉಂಟಾಗಿತ್ತು.

ಇದಕ್ಕೆ ಬಜ್ಪೆ ಗ್ರಾಮದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಶ್ರಮದಾನದ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಜ್ಪೆ ಗ್ರಾಮ ಸಮಿತಿಯ ಅಧ್ಯಕ್ಷ  ನಝೀರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಅಧ್ಯಕ್ಷ  ಹಸೈನಾರ್ ಮತ್ತು ಗ್ರಾಮ ಸಮಿತಿ ಉಪಾಧ್ಯಕ್ಷ ರಫೀಕ್ ಶಾಂತಿ ಗುಡ್ಡೆ, ಪಕ್ಷದ ಕಾರ್ಯಕರ್ತರಾದ ಸಿರಾಜ್, ಇರ್ಷಾದ್  ಜರಿ, ನಝೀರ್ ಸಾಣೂರು, ಇರ್ಷಾದ್ ಬಜ್ಪೆ, ಮುಸ್ತಫ ಶಾಂತಿಗುಡ್ಡೆ,ರಫೀಕ್ ಕೊಂಚಾರ್, ಇತರ ಕಾರ್ಯಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಕಲವಾರು ಭಾಗವಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News