ಮಾಸ್ಕ್ ಧರಿಸದವರಿಂದ 1,31,800ರೂ. ದಂಡ ವಸೂಲಿ

Update: 2020-09-27 15:21 GMT

ಉಡುಪಿ, ಸೆ.27: ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಕೋವಿಡ್-19 ನಿಯಮ ಉಲ್ಲಂಘಿಸಿದವರಿಂದ ಸೆ.26ರಂದು ಉಡುಪಿ ಜಿಲ್ಲೆಯಾದ್ಯಂತ ಒಟ್ಟು 1,31,800ರೂ. ದಂಡ ವಸೂಲಿ ಮಾಡಲಾಗಿದೆ.

ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ 11,100ರೂ.(ಈವರೆಗೆ ಒಟ್ಟು 1,25,500ರೂ.), ಜಿಲ್ಲೆಯ ಏಳು ತಾಲೂಕುಗಳ ಗ್ರಾಪಂ ವ್ಯಾಪ್ತಿಯಲ್ಲಿ 2400ರೂ.(ಒಟ್ಟು 1,56,500ರೂ.), ಪೊಲೀಸ್ ಇಲಾಖೆಯಿಂದ 1,16,500ರೂ.(3,06,000ರೂ.), ಕಂದಾಯ ಇಲಾಖಾ ವ್ಯಾಪ್ತಿಯಲ್ಲಿ 1800 ರೂ. ದಂಡ ವಸೂಲಿ ಮಾಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 5,89,800ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News