ಉಮಾ ಭಾರತಿಗೆ ಕೊರೋನ ಪಾಸಿಟಿವ್

Update: 2020-09-27 16:11 GMT

ಹೊಸದಿಲ್ಲಿ, ಸೆ.27: ಕೇಂದ್ರದ ಮಾಜಿ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿಗೆ ಕೊರೋನ ಪಾಸಿಟಿವ್ ವರದಿ ಬಂದಿದೆ. ಅವರೀಗ ಸ್ವತಃ ಕ್ವಾರಂಟೈನ್ ನಲ್ಲಿ ಇದ್ದಾರೆ.

ತನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಸ್ವತಃ ಕೋವಿಡ್ 19 ಪರೀಕ್ಷೆಗೆ ಒಳಪಟ್ಟು ಶಿಷ್ಟಾಚಾರವನ್ನು ಪಾಲಿಸಬೇಕೆಂದು ಉಮಾ ಭಾರತಿ ವಿನಂತಿಸಿದ್ದಾರೆ.

ಶನಿವಾರ ರಾತ್ರಿ ಟ್ವೀಟಿಸಿದ ಉಮಾಭಾರತಿ ,ನನಗೆ ಜ್ವರ ಬಂದ ಬಳಿಕ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದೇನೆ. ವರದಿಯು ಪಾಸಿಟಿವ್ ಬಂದಿದೆ. ಉತ್ತರಾಖಂಡದಲ್ಲಿ ಸ್ವತಃ ಕ್ವಾರಂಟೈನ್ ಗೆ ಒಳಗಾಗಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News