ಮೂಳೂರ್ : ಖಾಝಿ ಬೇಕಲ ಉಸ್ತಾದರ ಹೆಸರಲ್ಲಿ ಕನ್ವೆನ್ಷನ್ ಸೆಂಟರ್, ಲೈಬ್ರರಿ

Update: 2020-09-27 16:13 GMT

ಕಾಪು, ಸೆ.27: ಖಾಝಿಯಾಗಿ ಉಡುಪಿ ಜಿಲ್ಲೆಗೆ 23 ವರ್ಷಗಳ ಕಾಲ ನೇತೃತ್ವ ವಹಿಸಿದ ಶೈಖುನ ಬೇಕಲ ಉಸ್ತಾದರ ಹೆಸರು ಮುಂದಿನ ತಲೆ ಮಾರಿಗೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೂಳೂರಿನಲ್ಲಿ ಖಾಝಿ ಬೇಕಲ್ ಉಸ್ತಾದ್ ಕನ್ವೆನ್ಷನ್ ಸೆಂಟರ್ ಹಾಗೂ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು ಎಂದು ಮೂಳೂರು ಜಮಾತ್ ಅಧ್ಯಕ್ಷ ಎಂಎಚ್‌ಬಿ ಮುಹಮ್ಮದ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕೇಂದ್ರ ಮಸೀದಿ ಮೂಳೂರಿನಲ್ಲಿ ರವಿವಾರ ನಡೆದ ಖಾಝಿ ಶೈಖುನ ಬೇಕಲ ಉಸ್ತಾದರ ಹೆಸರಲ್ಲಿ ಅನುಸ್ಮರಣ ಹಾಗೂ ದುಅ ಮಜ್ಲಿಸ್ನಲ್ಲಿ ಅವರು ಮಾತನಾಡುತ್ತಿದ್ದರು.

ಆಧುನಿಕ ಸೌಕರ್ಯ ಹೊಂದಿರುವ ಈ ಹಾಲ್‌ನಲ್ಲಿ ಜಿಲ್ಲೆಯ ಎಲ್ಲಾ ಸುನ್ನೀ ಸಂಘ ಕುಟುಂಬಕ್ಕೆ ಸಭೆ ಹಾಗೂ ಧಾರ್ಮಿಕ ತರಗತಿ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಅದೇ ರೀತಿ ಸಾರ್ವಜನಿಕರಿಗೆ ಗ್ರಂಥಾಲಯದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

ಅಲ್ಹಾಜ್ ಹೈದರ್ ಅಲಿ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ತಹ್ಲಿಲ್ ಸಮರ್ಪಿಸಲಾಯಿತು. ಸಂಯುಕ್ತ ಜಮಾತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ನೇಜಾರ್, ಕಾರ್ಯದರ್ಶಿ ಹಾಜಿ ಎಂ.ಎ.ಬಾವು, ಮಸೀದಿ ಉಪಾಧ್ಯಕ್ಷ ಸೈಯದ್ ಮುರಾದ್ ಅಲಿ, ಜಿ.ಎಂ.ಉಮ್ಮರಬ್ಬ, ಕೋಶಾಧಿಕಾರಿ ಹಾಜಿ ಅಬ್ಬು ಮುಹಮ್ಮದ್, ಉಚ್ಚಿಲ ಮಸೀದಿ ಅಧ್ಯಕ್ಷ ಇಬ್ರಾಹಿಂ ತವಕ್ಕಲ್, ಮಸೀದಿ ಮಾಜಿ ಅಧ್ಯಕ್ಷರಾದ ಅದ್ದು ಹಾಜಿ, ಹಾಜಿ ಅಬ್ದುಲ್ ರಝಾಕ್ ಶಾಬಾನ್, ಅಬ್ದುಲ್ ಹಮೀದ್ ಅದ್ದು, ಸ್ಥಳೀಯ ಉಸ್ತಾದ್ ಹಕೀಮ್ ಮುಸ್ಲಿಯಾರ್ ಉಪಸ್ಥಿತರಿದ್ದರು.

ಮಸೀದಿ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಸ್ವಾಗತಿಸಿ, ಪ್ರಾಸ್ತಾ ವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹಮೀದ್ ಯೂಸುಫ್ ಹಾಗೂ ಫೈಝಲ್ ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News