ಬೇಕಲ್ ಉಸ್ತಾದ್ ಸೌಹಾರ್ದತೆಯ ಪ್ರತೀಕ: ಪ್ರಶಾಂತ್ ಕಾಜವ

Update: 2020-09-27 16:45 GMT

ಕೊಣಾಜೆ : ರಾಜ್ಯದ ಜಾತ್ಯಾತೀತ ತತ್ವ, ಚಿಂತನೆಗಳನ್ನು ಒಳಗೊಂಡಿದ್ದ ಮಹಾನ್ ವಿದ್ವಾಂಸರೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಧಾರ್ಮಿಕ ವಿದ್ವಾಂಸರಾಗಿದ್ದುಕೊಂಡು ಸೌಹಾರ್ದತೆಯ ಸಮಾಜವನ್ನು ಕಟ್ಟಿದ ಮಹಾನ್ ಶಕ್ತಿಯಾಗಿದ್ದಾರೆ ಎಂದು ಮುಡಿಪು‌ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಹೇಳಿದರು.

ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ನಿಧನರಾದ ಬೇಕಲ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಅವರಿಗೆ ಸಂತಾಪ ಸಭೆಯಲ್ಲಿ ನುಡಿ ನಮನವನ್ನು ಸಲ್ಲಿಸಿದರು.

ಅವರ ಪ್ರೀತಿಗೆ ಅವರ ನಿಧನದಂದು ಮುಡಿಪುವಿನಲ್ಲಿ ಸೇರಿದ್ದ ಜನಸ್ತೋಮವೇ ಸಾಕ್ಷಿಯಾಗಿದೆ. ಧರ್ಮ ಧರ್ಮ ದ ತಿಕ್ಕಾಟದ ಇಂತಹ ಕಾಲ ಘಟ್ಟದಲ್ಲಿ ಸೌಹಾರ್ದ ತೆಯ, ಜಾತ್ಯಾತೀತ ಕಲ್ಪನೆಯ ಇಂತಹ ಮಹಾನ್ ಪುರುಷರು ಮತ್ತಷ್ಟು ಹುಟ್ಟಿ ಬರಲಿ ಎಂದು ಹೇಳಿದರು.
ಬಂಟ್ವಾಳ ತಾಲೂಕು ಪಂಚಾಗಿತಯ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಅವರು ಮಾತನಾಡಿ, ಬೇಕಲ್ ಉಸ್ತಾದ್ ಅವರು ಸಮಾಜಕ್ಕೆ ಸೌಹಾರ್ದದ ಸಂದೇಶವನ್ನು ಕೊಟ್ಟವರಾಗಿದ್ದಾರೆ. ಎಲ್ಲರನ್ನೂ ಪ್ರೀತಿಸುವ ಮನೋಭಾವ ಅವರದ್ದಾಗಿದ್ದು, ಅವರ ಮಾರ್ಗದರ್ಶನ, ತತ್ವ ಚಿಂತನೆಗಳನ್ನು ಮುನ್ನಡೆಸೋಣ ಎಂದರು.

ದ.ಕ.ಜಿಲ್ಲಾ ಪಂ. ಸದಸ್ಯೆ ಮಮತಾ ಗಟ್ಟಿ, ಉಮ್ಮರ್ ಪಜೀರ್, ದೇವದಾಸ್ ಭಂಡಾರಿ, ನಾಸಿರ್ ನಡುಪದವು, ಅಬ್ದುಲ್ ಜಲೀಲ್ ಮೋಂಟು ಗೋಳಿ, ಪದ್ಮನಾಭ ನರಿಂಗಾನ, ಉಮ್ಮರ್ ಫಾರೂಕ್ ಪರಂಗಿಪೇಟೆ, ಇಂತಿಯಾಝ್, ಅರುಣ್ ಡಿಸೋಜ, ಸಮೀರ್ ಪಜೀರು, ಸಿದ್ದೀಕ್ ಪಾರೆ, ದಿನೇಶ್ ಮೂಳೂರು, ಅಬ್ದುಲ್ ರಝಾಕ್ ಕುಕ್ಕಾಜೆ, ಡಾ.ಸುರೇಖಾ, ರಮ್ಲಾನ್, ಸತ್ತಾರ್ ಕೈರಂಗಳ, ಜನಾರ್ದನ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಹೈದರ್ ಕೈರಂಗಳ ಅವರು ಸ್ವಾಗತಿಸಿದರು. ರಝಾಕ್ ಕುಕ್ಕಾಜೆ ವಂದಿಸಿದರು. ಸತ್ತಾರ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News