ನೀತಿ ತಂಡ ಕಡಬ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ

Update: 2020-09-27 17:03 GMT

ಕಡಬ : ರಕ್ತದಲ್ಲಿ ಜಾತಿ, ಮತ, ಧರ್ಮ, ಪಂಗಡ, ಬಿಡಾರ, ಕುಟೀರ ಯಾವುದನ್ನು ಗುರುತಿಸಲು ಸಾಧ್ಯವಿಲ್ಲ. ರಕ್ತಕ್ಕೆ ರಕ್ತವೇ ಪರ್ಯಾಯ. ಅಗತ್ಯ ಸಂದರ್ಭದಲ್ಲಿ  ಒಬ್ಬರ ರಕ್ತ ಇನ್ನೊಬ್ಬರಿಗೆ ಅನಿವಾರ್ಯ, ಇದರ ತಿರುಳನ್ನು ಅರಿತು ಸೌಹಾರ್ದತೆಯ ಬದುಕು ನಮ್ಮಲ್ಲಿ ಮೂಡಲಿ ಎಂದು ಪೇರಡ್ಕ ರೆಂಜಲಾಡಿ ಚರ್ಚ್ ಧರ್ಮಗುರು ರೆ.ಫಾ. ಸುನಿಲ್ ಪಿ. ತೊಮಸ್ ಹೇಳಿದರು.

ನೀತಿ ತಂಡ ಕಡಬ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಮಂಗಳೂರು ಇದರ ಸಹಯೋಗದಲ್ಲಿ ಸಂಘಟಿಸಿದ 68ನೆ ಸಾರ್ವಜನಿಕ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾರತೀಯ ಸೇನಾ ನಿವೃತ್ತ ಸೈನಿಕ ಸುನಿಲ್, ನೂಜಿಬಾಳ್ತಿಲ ಕೃಷ್ಣ ಎಲೆಕ್ಟ್ರಿಕಲ್ ಮಾಲಕ ಪಿ.ಕೆ.ಅಭಿಲಾಷ್, ಕಡಬ ತಾಲೂಕು ಎಸ್.ಡಿ.ಪಿ.ಐ ಅಧ್ಯಕ್ಷ ರಮ್ಲಾ ಸನ್ ರೈಸ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮಾಜಿ ಸದಸ್ಯರಾದ ಅಬ್ದುಲ್ ಹಮೀದ್ ಗೋಳ್ತಮಜಲ್, ನೀತಿ ತಂಡ ಜಿಲ್ಲಾಧ್ಯಕ್ಷ ಪ್ರಮೋದ್ ತೊಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ಲಡ್ ಹೆಲ್ಪ್‌ ಕೇರ್ ಅಧ್ಯಕ್ಷ ನಝೀರ್ ಹುಸೈನ್ ವಹಿಸಿದ್ದರು.  ಬಾತೀಷ್ ತೆಕ್ಕಾರ್ ಪ್ರಸ್ತಾವನೆಗೈದರು. ಸತ್ತಾರ್ ಸ್ವಾಗತಿಸಿದರು. ಸಂಚಾಲಕರಾದ ಇಂತಿಯಾಝ್ ಬಜ್ಪೆ , ಮುಸ್ತಫಾ ಕೆ.ಸಿ.ರೋಡ್, ಅಬ್ದುಲ್ ಖಾದರ್ ಮುಂಚೂರು, ಬಶೀರ್ ಮಂಗಳೂರು, ಮಹಮ್ಮದ್ ಸತ್ತಾರ್ ಪುತ್ತೂರು ಸಹಕರಿಸಿದರು.

ಬಶೀರ್ ಕಡಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News