ಪಾಕಿಸ್ತಾನ: ಪ್ರತಿಪಕ್ಷ ನಾಯಕ ಬಂಧನ

Update: 2020-09-28 17:23 GMT

ಲಾಹೋರ್ (ಪಾಕಿಸ್ತಾನ), ಸೆ. 28: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಪ್ರತಿಪಕ್ಷ ನಾಯಕ ಹಾಗೂ ಪಿಎಮ್‌ಎಲ್-ಎನ್ ಅಧ್ಯಕ್ಷ ಶಹಬಾಝ್ ಶರೀಫ್‌ರ ಜಾಮೀನು ಅರ್ಜಿಯನ್ನು ನ್ಯಾಯಾಲಯವೊಂದು ತಿರಸ್ಕರಿಸಿದ ಬಳಿಕ, ಭ್ರಷ್ಟಾಚಾರ ನಿಗ್ರಹ ಸಂಸ್ಥೆ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ ಅವರನ್ನು ಸೋಮವಾರ ಬಂಧಿಸಿದೆ.

ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಮ್‌ಎಲ್-ಎನ್) ಪಕ್ಷವು ಮುಂದಿನ ತಿಂಗಳು ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಿದೆ. ಅದಕ್ಕೆ ಮುಂಚಿತವಾಗಿಯೇ ಪಕ್ಷದ ಮುಖ್ಯಸ್ಥ ಶಹಬಾಝ್‌ರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News