ರಾಜ್ ಕಪೂರ್, ದಿಲೀಪ್ ಕುಮಾರ್ ಮನೆಗಳ ಖರೀದಿ ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವ ರಾಜ್ಯ ಸರಕಾರ ನಿರ್ಧಾರ

Update: 2020-09-28 17:36 GMT

ಪೇಶಾವರ (ಪಾಕಿಸ್ತಾನ), ಸೆ. 28: ಬಾಲಿವುಡ್ ದಂತಕತೆಗಳಾದ ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಮನೆಗಳನ್ನು ಖರೀದಿಸಲು ಪಾಕಿಸ್ತಾನದ ಖೈಬರ್-ಪಖ್ತೂನ್‌ಖ್ವ ಪ್ರಾಂತೀಯ ಸರಕಾರ ನಿರ್ಧರಿಸಿದೆ. ಅತ್ಯಂತ ಶಿಥಿಲಗೊಂಡಿರುವ ಈ ಐತಿಹಾಸಿಕ ಕಟ್ಟಡಗಳು ಧ್ವಂಸಗೊಳ್ಳುವ ಭೀತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಸಂರಕ್ಷಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಾಂತೀಯ ಸರಕಾರ ತಿಳಿಸಿದೆ.

 ಈ ಎರಡು ಕಟ್ಟಡಗಳನ್ನು ಖರೀದಿಸಲು ಬೇಕಾದ ಹಣವನ್ನು ಮಂಜೂರು ಮಾಡಲು ಖೈಬರ್-ಪಖ್ತೂನ್‌ಖ್ವ ಪ್ರಾಂತೀಯ ಸರಕಾರದ ಪುರಾತತ್ವ ಇಲಾಖೆ ನಿರ್ಧರಿಸಿದೆ. ಪೇಶಾವರ ನಗರದ ಹೃದಯ ಭಾಗದಲ್ಲಿರುವ ಈ ಕಟ್ಟಡಗಳನ್ನು ರಾಷ್ಟ್ರೀಯ ಪರಂಪರೆಯ ಕಟ್ಟಡಗಳು ಎಂಬುದಾಗಿ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News