ಚೀನಾದ ಕೊರೋನ ಲಸಿಕೆ ಪರೀಕ್ಷೆಯಲ್ಲಿ ಭಾಗವಹಿಸಿದ ಹಲವು ದೇಶಗಳು

Update: 2020-09-29 17:26 GMT

ಬೀಜಿಂಗ್, ಸೆ. 29: ತನ್ನ ಪ್ರಾಯೋಗಿಕ ಕೋವಿಡ್-19 ಲಸಿಕೆಗಳ ಅಂತಿಮ ಹಂತದ ಪರೀಕ್ಷೆಗಳಲ್ಲಿ 10ಕ್ಕೂ ಅಧಿಕ ದೇಶಗಳನ್ನು ತೊಡಗಿಸಿಕೊಳ್ಳುವಲ್ಲಿ ಚೀನಾ ಯಶಸ್ವಿಯಾಗಿದೆ. ಪೆರು, ಬ್ರೆಝಿಲ್, ಅರ್ಜೆಂಟೀನ, ಬಹರೈನ್, ಯುಎಇ, ಈಜಿಪ್ಟ್, ಪಾಕಿಸ್ತಾನ, ಟರ್ಕಿ, ಮೊರೊಕ್ಕೊ, ಸೌದಿ ಅರೇಬಿಯ, ಬಾಂಗ್ಲಾದೇಶ, ಇಂಡೋನೇಶ್ಯ ಮತ್ತು ರಶ್ಯ ಸೇರಿದಂತೆ ಹಲವಾರು ದೇಶಗಳ ಸಾವಿರಾರು ಜನರಿಗೆ ಚೀನಾದ ಮೂರು ಅಗ್ರ ಲಸಿಕ ತಯಾರಿಕಾ ಕಂಪೆನಿಗಳು ಉತ್ಪಾದಿಸಿರುವ ಕೊರೋನ ಲಸಿಕೆಗಳನ್ನು ಚುಚ್ಚಲಾಗಿದೆ ಅಥವಾ ಶೀಘ್ರವೇ ಚುಚ್ಚಲಾಗುತ್ತದೆ ಎಂದು ಹಾಂಕಾಂಗ್‌ನಲ್ಲಿರುವ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆ ಮಂಗಳವಾರ ವರದಿ ಮಾಡಿದೆ.

ಈ ಪರೀಕ್ಷೆಯಲ್ಲಿ ಭಾಗವಹಿಸುವ ಮೂಲಕ, ಲಸಿಕೆಗೆ ಅನುಮೋದನೆ ದೊರಕಿದ ಬಳಿಕ ಆರಂಭದಲ್ಲಿಯೇ ಲಸಿಕೆಗಳನ್ನು ಪಡೆಯುವ ಅರ್ಹತೆಯನ್ನು ಈ ದೇಶಗಳು ಪಡೆದುಕೊಂಡಿವೆ. ಕೆಲವು ಕಂಪೆನಿಗಳ ಆರಂಭಿಕ ಲಸಿಕೆಗಳನ್ನು ಜಗತ್ತಿನ ಶ್ರೀಮಂತ ದೇಶಗಳು ಈಗಾಗಲೇ ತಮಗಾಗಿ ಕಾದಿರಿಸುವುದರಿಂದ ಈ ದೇಶಗಳು ಈಗ ಸಮಾಧಾನ ನಿಟ್ಟುಸಿರು ಬಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News