ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಸಮುದ್ರದಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಜೀವಂತ ಪತ್ತೆ

Update: 2020-09-30 06:02 GMT

ಕೊಲಂಬಿಯಾ: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕೊಲಂಬಿಯಾದ ಮಹಿಳೆಯೊಬ್ಬರು ಸಮುದ್ರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಕೊಲಂಬಿಯಾದ ಸಮುದ್ರದಲ್ಲಿ ಏಂಜಲಿಕಾ ಗೈಟನ್ ಎಂಬ ಈ ಮಹಿಳೆ ತೇಲುತ್ತಿರುವುದನ್ನು ಕಂಡು ಚಕಿತಗೊಂಡ ಮೀನುಗಾರರು ಆಕೆಯನ್ನು ರಕ್ಷಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಯೆರ್ಟೊ ಕೊಲಂಬಿಯಾದ ತೀರದಿಂದ ಸುಮಾರು ಎರಡು ಕಿಮೀ ದೂರದಲ್ಲಿ ಆಕೆಯನ್ನು ಮೀನುಗಾರ ರೊಲಾಂಡೊ ವಿಸ್ಬಲ್ ಮತ್ತಾತನ ಸ್ನೇಹಿತ ಪತ್ತೆ ಹಚ್ಚಿದ್ದಾರೆ.

ಆರಂಭದಲ್ಲಿ ಮೀನುಗಾರರಿಬ್ಬರೂ  ಆಕೆಯನ್ನು ದೂರದಿಂದ ನೋಡಿದಾಗ ಮರದ ತುಂಡೆಂದು ತಪ್ಪಾಗಿ ಗ್ರಹಿಸಿದ್ದರು. ಆದರೆ ನಂತರ ಆಕೆ ಕೈಮೇಲಕ್ಕೆತ್ತಿದಾಗ ಇಬ್ಬರೂ ಅತ್ತ ಧಾವಿಸಿ ಆಕೆಯನ್ನು ಬೋಟಿನೊಳಕ್ಕೆ  ಎಳೆದಿದ್ದಾರೆ. ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ನೀರಿನಲ್ಲಿದ್ದುದರಿಂದ ಆಕೆ ಹೈಪೊಥರ್ಮಿಯಾದಿಂದ ಬಳಲುತ್ತಿದ್ದರಲ್ಲದೆ ತೀವ್ರ ನಿತ್ರಾಣಳಾಗಿದ್ದರು.

ಆಕೆಯನ್ನು ರಕ್ಷಿಸುತ್ತಲೇ “ನನಗೆ ಮತ್ತೆ ಮರುಜೀವ ದೊರಕಿದೆ, ನಾನು ಸಾಯುವುದು ದೇವರಿಗೆ ಬೇಕಿಲ್ಲ'' ಎಂದು  ಆಕೆ ಉದ್ಗರಿಸಿದರು.

ತನ್ನ ಮಾಜಿ ಪತಿಯಿಂದ 20 ವರ್ಷಗಳ ಕಾಲ ಕಿರುಕುಳ ಅನುಭವಿಸಿ ಅಂತಿಮವಾಗಿ ಆತನನ್ನು ತೊರೆಯಲು 2018ರಲ್ಲಿ ನಿರ್ಧರಿಸಿದ್ದಾಗಿ ಆಕೆ ಹೇಳುತ್ತಾರೆ. ಮಕ್ಕಳು ಚಿಕ್ಕವರಾಗಿರುವುದರಿಂದ  ಸಾಕಷ್ಟು ಸಮಸ್ಯೆಯಾಯಿತು. ಕೊನೆಗೆ ಆತ ತನ್ನನ್ನು ಕೊಲ್ಲಲೆತ್ನಿಸಿದಾಗ ಸೆಪ್ಟೆಂಬರ್ 2018ರಲ್ಲಿ ಆತನನ್ನು ತ್ಯಜಿಸಿ ಆರು ತಿಂಗಳು ರಸ್ತೆಗಳಲ್ಲಿ ಅಲೆದಾಡಿ ಕೊನೆಗೆ ಒಂದು ರಕ್ಷಣಾ ಕೇಂದ್ರದಲ್ಲಿ ಆಶ್ರಯ ಪಡೆದರೂ ಅಲ್ಲಿಂದಲೂ ಹೊರನಡೆಯಲು ಹೇಳಿದಾಗ ಅನಿವಾರ್ಯವಾಗಿ ಸಮುದ್ರಕ್ಕೆ ಹಾರಿದ್ದಾಗಿ ಆಕೆ ತಿಳಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳು ಆಕೆಯ ಒಬ್ಬ ಪುತ್ರಿಯನ್ನು ಪತ್ತೆ ಹಚ್ಚಿದ್ದು ತಾಯಿಯ ಬಗ್ಗೆ ಎರಡು ವರ್ಷ ಸುಳಿವು ದೊರಕಿರಲಿಲ್ಲ ಎಂದಿದ್ದಾರೆ. ಇಬ್ಬರು ಪುತ್ರಿಯರೂ ಇದೀಗ ತಾಯಿಗಾಗಿ ನಿಧಿ ಸಂಗ್ರಹಿಸುತ್ತಿದ್ದಾರೆ.

Full View

Amigos les comparto todos los vídeos que logré al momento del rescate en Altamar de Angélica Gaitan frente a las costas del municipio de Puerto Colombia el día sábado 26 de Septiembre de 2020 !

Posted by Rolando Visbal Lux on Tuesday, 29 September 2020

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News