ಮಂಗಳೂರು : ವೆಲ್ ನೆಸ್ ಹೆಲ್ಪ್ ಲೈನ್ ನಿಂದ ಕೊರೋನ ಮುಕ್ತ ಅಭಿಯಾನ

Update: 2020-09-30 07:50 GMT

ಮಂಗಳೂರು : ಎನ್.ಜಿ.ಒ ಮತ್ತು ವೈದ್ಯರ ಸಹಯೋಗದ ವೆಲ್ ನೆಸ್ ಹೆಲ್ಪ್ ಲೈನ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಮುಕ್ತ ಅಭಿಯಾನ 'ಉಚಿತ ಗಂಟಲು ದ್ರವ ಪರೀಕ್ಷೆ' ನಡೆಯುತ್ತಿದೆ. 

ಈಗಾಗಲೇ  ವೆಲ್ ನೆಸ್ ಮೂಲಕ ಉಚಿತ ಸಹಾಯವಾಣಿ ತೆರೆಯಲಾಗಿದ್ದು, ಸುಮಾರು ಹದಿನೈದು ಸಾವಿರ ಜನರಿಗೆ ಆಯುಷ್ಮಾನ್ ಕಾರ್ಡ್ ಮಾಡಿ ಕೊಡಲಾಗಿದೆ. ಅದೇ ರೀತಿ, ತುರ್ತು ಪರಿಸ್ಥಿತಿಯಲ್ಲಿ ಆಕ್ಸಿಜನ್ ಸಿಲಿಂಡರ್, ಪಿಪಿಇ ಕಿಟ್ ಗಳನ್ನು ಸಂಸ್ಥೆ ನೀಡುತ್ತಿದೆ. 150ಕ್ಕಿಂತ ಹೆಚ್ಚು ರೋಗಿಗಳಿಗೆ ಪ್ಲಾಸ್ಮಾ ನೀಡಿದೆ. ಇದೀಗ ಹೆಚ್ಚುತ್ತಿರುವ ಕೊರೋನ ಸೋಂಕು ಪ್ರಕರಣದ ಗಂಭೀರತೆಯನ್ನು ಅರಿತು, ಉಚಿತ ಗಂಟಲು ದ್ರವ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕಂಕನಾಡಿಯಲ್ಲಿ, ಕ್ಲಾಸಿಕ್ ಹಾರ್ಮೊನಿ ಮತ್ತು ಸಿಂಪೊನಿ ಓನರ್ ಅಸೋಸಿಯೇಶನ್ ಸಹಯೋಗದಲ್ಲಿ ಅಪಾರ್ಟ್ ಮೆಂಟ್ ನ ನಿವಾಸಿಗಳಿಗೆ ಮತ್ತು ಸ್ಥಳೀಯ ನಾಗರಿಕರಿಗೆ ಕೋವಿಡ್ ಸ್ವಾಬ್ ಟೆಸ್ಟ್ ಉಚಿತವಾಗಿ ಮಾಡುವುದರ ಜೊತೆಗೆ ಕೊರೋನ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಸುಮಾರು 150 ಜನರ ಉಚಿತ ಗಂಟಲು ದ್ರವ ಪರೀಕ್ಷಿಸಲಾಗಿದೆ ಎಂದು ವೆಲ್ ನೆಸ್ಸ್ ಹೆಲ್ಪ್ ಲೈನ್ ಇದರ ಆಸಿಫ್ ಡೀಲ್ಸ್ ಹೇಳಿದರು.

ವೆಲ್ ನೆಸ್ ಹೆಲ್ಪ್ ಲೈನ್, ಹಿದಾಯ ಪೌಂಡೇಶನ್, ಬಿ- ಹ್ಯೂಮನ್ ಜಂಟಿಯಾಗಿ ಈ ಉಚಿತ ಸ್ವಾಬ್ ಟೆಸ್ಟ್ ನಡೆಸಿ ಕೊಟ್ಟಿತ್ತು. ಜಿಲ್ಲೆಯಲ್ಲಿ ಹಲವು ಪಟ್ಟಣ, ಗ್ರಾಮ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ಅಯೋಜಿಸಲು ವೆಲ್ ನೆಸ್ ಹೆಲ್ಪ್ ಲೈನ್ ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಕಾರ್ಯಕ್ರಮದಲ್ಲಿ ಕ್ಲಾಸಿಕ್ ಹಾರ್ಮೊನಿ ಅಸೋಸಿಯೇಶನ್ ನ ನಾಗರಾಜ್, ಮುಬೀನ್, ರಹ್ಮಾನ್, ಆಸಿಫ್ ಡೀಲ್ಸ್, ಹಿದಾಯ ಪೌಂಡೇಶನ್ ನ ಅಲ್ತಾಫ್ ,  ಸಾಸ್ಕೋ ಅಫೀಝ್, ಟೀಂ ಬಿ ಹ್ಯೂಮನ್ ನ ಅಹ್ನಾಫ್ ಡೀಲ್ಸ್ ಮತ್ತು ತಮೀಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News