ಕೊಪ್ಪ : ದಿ.ಮಹೇಂದ್ರ ಕುಮಾರ್, ಹನೀಫ್ ಕೊಪ್ಪ, ಲತೀಫ್ ಸ್ಮರಣಾರ್ಥ ರಕ್ತದಾನ ಶಿಬಿರ

Update: 2020-09-30 10:39 GMT

ಕೊಪ್ಪ : ದಿವಂಗತರಾದ ಮಹೇಂದ್ರ ಕುಮಾರ್, ಹನೀಫ್ ಕೊಪ್ಪ ಹಾಗೂ ಲತೀಫ್ ಅವರ ಸ್ಮರಣಾರ್ಥವಾಗಿ ಕೊಪ್ಪದ ಪುರಭವನದಲ್ಲಿ ಬುಧವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್, ಮದನಿ ಯಂಗ್ ಮೆನ್ಸ್ ಕೊಪ್ಪ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ರಕ್ತದಾನ ಶಿಬಿರವು ಸೌಹಾರ್ದತೆಗೆ ಸಾಕ್ಷಿಯಾಗಿತ್ತು.

ಕಾರ್ಯಕ್ರಮದಲ್ಲಿ ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ, ಪ್ರಶಮನಿ ಆಸ್ಪತ್ರೆ ವೈದ್ಯರಾದ ಉದಯ್ ಶಂಕರ್, ಕೊಪ್ಪ ಪಟ್ಟಣದ  ಜಾಮೀಯ ಮಸೀದಿ ಖತೀಬ್ ಇರ್ಫಾನ್ ಹಝ್ರತ್, ಸಮಾಜ ಸೇವಕರಾದ ಆಸಿಫ್ ಆಪತ್ಬಾಂಧವ, ಅಬ್ದುಲ್ ಖಾದರ್ ದೇರಳಕಟ್ಟೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವ ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಸುಧೀರ್ ಕುಮಾರ್ ಮುರೊಳ್ಳಿ ಅವರು ಜಾತಿ, ಧರ್ಮ ಮರೆತು ನಿಸ್ವಾರ್ಥವಾಗಿ ಯುವಕರು ಮಾಡುವ ಸೇವೆಗೆ ನನ್ನ ಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಡಾ. ಉದಯ್ ಶಂಕರ್  ರಕ್ತದಾನದ ಮಹತ್ವ ಹಾಗೂ ಪ್ರಯೋಜನಗಳನ್ನು ವಿವರಿಸಿದರು. ಆಸಿಫ್ ಆಪತ್ಬಾಂಧವ ತಮ್ಮ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News