ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿವಿಡಿ ಬಿಡುಗಡೆ

Update: 2020-09-30 11:47 GMT

ಮಂಗಳೂರು, ಸೆ. 30: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಇತ್ತೀಚೆಗಷ್ಟೆ ಲೋಕಾರ್ಪಣೆಗೊಳಿಸಿದ ಹೊಸ ಬ್ಯಾರಿ ಲಿಪಿಯ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿವಿಡಿ ಬಿಡುಗಡೆ ಕಾರ್ಯಕ್ರಮವು ಬುಧವಾರ ಮಂಗಳೂರು ತಾಪಂ ಸಭಾಂಗಣದಲ್ಲಿ ನಡೆಯಿತು.

ಡಿವಿಡಿ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ‌ ಪರಿಷತ್ ಅಧ್ಯಕ್ಷ ಪ್ರದೀಪ್ ‌ಕುಮಾರ್ ಕಲ್ಕೂರ ಬ್ಯಾರಿ ಸಂಸ್ಕೃತಿಯು ತುಳು ಸಂಸ್ಕೃತಿಯೊಂದಿಗೆ ಸಮ್ಮಿಲಿತಗೊಂಡಿವೆ. ಈ‌ ಮಧ್ಯೆ ಹೊಸ ಬ್ಯಾರಿ ಲಿಪಿ ರಚನೆಯ ಪ್ರಯತ್ನ ಶ್ಲಾಘನೀಯ. ಇದರಿಂದ ಕನ್ನಡ ಭಾಷೆಗೆ ಯಾವುದೇ ತೊಂದರೆಯಿಲ್ಲ. ಇದೊಂದು ಭಾವನಾತ್ಮಕ‌ ಪ್ರಕ್ರಿಯೆಯಾಗಿದೆ. ಈ ಬಗ್ಗೆ ಟೀಕೆಗಳು ಅನಗತ್ಯ ಎಂದರು.

ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ಬ್ಯಾರಿ ಲಿಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಳಸುವ ಆಂದೋಲನಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಬ್ಯಾರಿ ಲಿಪಿ ಗ್ರಾಫಿಕ್ ಡಿಸೈನರ್ ಸಚಿನ್ ಶಾ, ಲಿಪಿ ರಚನೆಕಾರರಾದ ಅಬ್ದುರ್ರಝಾಕ್ ಅನಂತಾಡಿ, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಡಾ. ಅಬೂಬಕರ್ ಸಿದ್ದೀಕ್, ಹೈದರ್ ಅಲಿ, ಎಕೆ ಕುಕ್ಕಿಲ, ಹಂಝ ಮಲಾರ್, ಅಬ್ದುಸ್ಸಮದ್ ಬಾವಾ ಪುತ್ತೂರು, ಅಕಾಡಮಿಯ ಸದಸ್ಯೆ ‌ನಫೀಸತ್ ಮಿಸ್ರಿಯಾ ಉಪಸ್ಥಿತರಿದ್ದರು. ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡಮಿಯ ಸದಸ್ಯ ಸಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News