ಮಣಿಪಾಲ ಕೆಎಂಸಿಯಲ್ಲಿ ಪ್ರಜನನ ಔಷಧ, ಶಸ್ತ್ರಚಿಕಿತ್ಸೆ ವಿಭಾಗ ಪ್ರಾರಂಭ

Update: 2020-09-30 12:49 GMT

ಉಡುಪಿ, ಸೆ.30: ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಅ.1ರ ಬುಧವಾರ ದಿಂದ ಸಂತಾನೋತ್ಪತ್ತಿ (ಪ್ರಜನನ) ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗ ಆರಂಭವಾಗಲಿದೆ ಎಂದು ಕಸ್ತೂರ್‌ಬಾ ಆಸ್ಪತ್ರೆಯ ವೈದ್ಯಕೀಯ ಅಧೀ  ಕ ಡಾ.ಅವಿನಾಶ್ ಶೆಟ್ಟಿ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ (ಮಾಹೆ) ಅನುಮೋದನೆಯಂತೆ ಈ ವಿಭಾಗ ಪ್ರಾರಂಭಗೊಳ್ಳುತಿದ್ದು, ಡಾ.ಪ್ರತಾಪ್ ಕುಮಾರ್ ಅವರ ನೇತೃತ್ವದಲ್ಲಿ ಈ ವಿಭಾಗ ಎಲ್ಲಾ ದಿನಗಳಲ್ಲಿ ಬೆಳಗ್ಗೆ 8:30 ರಿಂದ ಸಂಜೆ 4:00ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

ಸಂತಾನೋತ್ಪತ್ತಿ ಔಷಧ (ಪ್ರಜನನ) ಮತ್ತು ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಪ್ರತಾಪ್ ಕುಮಾರ್ ಎನ್ ಅವರು ಮಣಿಪಾಲ್ ಸಹಾಹಿತ ಪ್ರಜನನ ಕೇಂದ್ರವನ್ನು ಪ್ರತ್ಯೇಕ ವಿಭಾಗವಾಗಿ ಉನ್ನತೀಕರಿಸಿದ್ದು, ಅದು ಸಂತಾನೋತ್ಪತ್ತಿ ಔಷಧ (ಪ್ರಜನನ) ಮತ್ತು ಶಸ್ತ್ರಚಿಕಿತ್ಸೆ ವಿಭಾಗವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಡಾ.ಶೆಟ್ಟಿ ಹೇಳಿದ್ದಾರೆ.

ಈ ವಿಭಾಗದಲ್ಲಿ ಅಂಡೋತ್ಪತ್ತಿ ಪ್ರಚೋದನೆ, ಟ್ರಾನ್ಸ್ವಾಜಿನಲ್ ಸೋನೋ ಗ್ರಾಫಿಕ್ ಕಾರ್ಯವಿಧಾನಗಳು, ಗರ್ಭಾಶಯದ ಗರ್ಭಧಾರಣೆ, ಭ್ರೂಣ ವರ್ಗಾವಣೆಯೊಂದಿಗೆ ವಿಟ್ರೊ ಫಲೀಕರಣ(ಐವಿಎಫ್-ಇಟಿ), ಇಂಟ್ರಾ ಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್ (ಐಸಿಎಸ್‌ಐ), ಲೇಸರ್ ಅಸಿಸ್ಟೆಡ್ ಹ್ಯಾಚಿಂಗ್, ವಾಸಲ್/ಎಪಿಡಿಡೈಮಲ್ ಮತ್ತು ಟೆಸ್ಟಿಕ್ಯುಲರ್ ವೀರ್ಯ ಹೊರ ತೆಗೆಯುವಿಕೆ (ಮೆಸಾ/ಟೆಸಾ), ಮೊಟ್ಟೆ/ವೀರ್ಯ ದಾನ ಕಾರ್ಯಕ್ರಮ, ಭ್ರೂಣ ಮತ್ತು ವೀರ್ಯ ಬ್ಯಾಂಕಿಂಗ್, ಕಂಪ್ಯೂಟರ್ ನೆರವಿನ ವೀರ್ಯ ಅಧ್ಯಯನ (ಸಿಎಎಸ್‌ಎ), ವೀರ್ಯ ಡಿಎನ್‌ಎ ಹಾನಿ ಮೌಲ್ಯಮಾಪನ, ವೈ ಕ್ರೋಮೋಸೋಮ್ ಮೈಕ್ರೊಡೈಲೆಶನ್ ಪತ್ತೆ, ಲ್ಯಾಪರೊಸ್ಕೋಪಿಕ್ ಮತ್ತು ಹಿಸ್ಟರೊಸ್ಕೋಪಿಕ್ ಕಾರ್ಯವಿಧಾನಗಳು, ಸಮಗ್ರ ಪುರುಷ ಬಂಜೆತನ ವೌಲ್ಯಮಾಪನ ಮತ್ತು ಚಿಕಿತ್ಸೆ, ಸರೊಗಸಿ ಮುಂತಾದ ಆಧುನಿಕ ಸೌಲಭ್ಯಗಳು ದೊಕಲಿವೆ ಎಂದು ಅವರು ವಿವರಿಸಿದರು.

ಈ ವಿಭಾಗದ ಆರಂಭದಿಂದ ನಾವು ಹೆಚ್ಚಿನ ಸಂಶೋಧನಾ ಚಟುವಟಿಕೆ ಗಳನ್ನು ನಡೆಸಬಹುದು. ಅಲ್ಲದೇ ಇದರಿಂದ ಸಮಾಜಕ್ಕೆ ಹೆಚ್ಚಿನ ಸಹಾಯವಾ ಗಲಿದೆ ಎಂದು ಕೆಎಂಸಿಯ ಡೀನ್ ಡಾ.ಶರತ್ ಕೆ.ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News