ಅಕ್ಟೊಬರ್ 2ರಂದು ಮೂರು ವಿ.ವಿ.ಗಳಿಂದ ತುಳು ದಿನಾಚರಣೆ

Update: 2020-09-30 12:51 GMT

ಉಡುಪಿ, ಸೆ.30: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ತುಳುವಿನ ಗರಿಮೆಯ ’ತುಳು ನಿಘಂಟು’ ಸಂಪಾದನಾ ಕಾರ್ಯಾರಂಭದ ನೆನಪಿಗಾಗಿ 1979ರಿಂದ ಪ್ರತಿವರ್ಷ ಅಕ್ಟೊಬರ್ 2ರಂದು ತುಳು ದಿನವನ್ನು ಆಚರಿಸಲಾಗುತ್ತಿದೆ.

ಈ ಬಾರಿ ಮಣಿಪಾಲ ವಿಶ್ವವಿದ್ಯಾನಿಲಯದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಗಾಂಧಿಯನ್ ಸೆಂಟರ್, ಮಂಗಳೂರು ವಿಶ್ವ ವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠಗಳ ಸಹಯೋಗದೊಂದಿಗೆ ನಿಟ್ಟೆ ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಕೇಂದ್ರವು ಅ.2ರಂದು ‘ತುಳು ದಿನ’ದ ಆಯೋಜೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

ಈ ಬಾರಿ ಇದರಲ್ಲಿ ವಿಶ್ವಾದ್ಯಂತ ಇರುವ ತುಳುಕೂಟಗಳ ಭಾಗವಹಿಸುವಿಕೆ ಮತ್ತು ಪ್ರಸ್ತುತಿ ಇರುತ್ತದೆ. ತುಳುವರನ್ನು, ತುಳು ಅಭಿಮಾನಿ ಗಳನ್ನು ಆಚರಣೆಯಲ್ಲಿ ಸೇರಿಕೊಳ್ಳಲು ಮಣಿಪಾಲ ವಿವಿ, ಮಂಗಳೂರು ವಿವಿ ಹಾಗೂ ನಿಟ್ಟೆ ವಿವಿಗಳು ಆಸಕ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದೆ ಎಂದು ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

ನೇರಪ್ರಸಾರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಆಸಕ್ತರು ಈ ಲಿಂಕ್ ಮೂಲಕ -http://tinyurl.com/nittetube- ಪ್ರವೇಶಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News