ವಿಶ್ವ ಹೃದಯ ದಿನದ ವಿಶಿಷ್ಟ ಕಲಾಕೃತಿ ಅನಾವರಣ

Update: 2020-09-30 12:53 GMT

ಮಣಿಪಾಲ, ಸೆ.30: ವಿಶ್ವ ಹೃದಯ ದಿನ-2020ರ ಅಂಗವಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗ ದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ್ ರಚಿಸಿದ ಹೃದಯ ಜಾಗೃತಿ ಕಲಾಕೃತಿಯನ್ನು ಸಮುದಾಯ ವೈದ್ಯಕೀಯ ವಿಭಾಗದ ಡಾ.ಪವನ್ ಕುಮಾರ್ ಮತ್ತು ಡಾ. ಸುಮ ನಾಯರ್ ಬುಧವಾರ ಕೆಎಂಸಿ ಗ್ರೀನ್ಸ್‌ನಲ್ಲಿ ಅನಾವರಣಗೊಳಿಸಿದರು.

ಹೃದಯದ ಆರೋಗ್ಯಕ್ಕೆ ಬೇಕಾದ ಆಹಾರ ಪದ್ಧತಿ, ಮುಖ್ಯವಾದ ಆಹಾರ ಗಳನ್ನು ಕಲಾಕೃತಿಯಲ್ಲಿ ಬಿಂಬಿಸಲಾಗಿದೆ. ಅದರ ಜೊತೆಯಲ್ಲಿ ದೈಹಿಕ ವ್ಯಾಯಾಮ ಮತ್ತು ಯೋಗದ ಪ್ರಾಮುಖ್ಯತೆಯನ್ನು ಕಲಾಕೃತಿಯಲ್ಲಿ ವಿಶಿಷ್ಟ ರೀತಿಯಲ್ಲಿ ವಿಭಿನ್ನವಾಗಿ ಬಿಂಬಿಸಲಾಗಿದೆ. ಕಲಾಕೃತಿಯ ಜೊತೆ ಯಲ್ಲಿ ಹೃದಯ ಜಾಗ್ರೃತಿ ಸಂದೇಶ ನೀಡುವ ಆಕರ್ಷಕ ಬಿತ್ತಿಪತ್ರಗಳನ್ನು ಸಹ ಪ್ರದರ್ಶಿಸಲಾಗಿದೆ.

ಡಾ.ಅಶ್ವಿನಿ ಕುಮಾರ್, ಡಾ.ವಿನೋದ್, ಡಾ.ಮುರಳಿಧರ್ ಕುಲಕರ್ಣಿ, ಡಾ. ರಂಜಿತಾ ಶೆಟ್ಟಿ, ಡಾ.ಚೈತ್ರಾ, ಡಾ.ಈಶ್ವರಿ, ಡಾ.ಅಖಿಲಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಕಲಾಕೃತಿಯು ಕೆಎಂಸಿ ಗ್ರೀನ್ಸ್ ಆವರಣದಲ್ಲಿ ಒಂದು ವಾರ ಕಾಲ ಪ್ರದರ್ಶನಗೊಳ್ಳಲಿದೆ ಎಂದು ಕಲಾವಿದ ಶ್ರೀನಾಥ್ ಮಣಿಪಾಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News