ಕೋಳಿ ಅಂಕ: 11 ಮಂದಿ ಬಂಧನ

Update: 2020-09-30 16:34 GMT

ಹೆಬ್ರಿ, ಸೆ.30: ವರಂಗ ಗ್ರಾಮದ ತಲೆಮನೆ ಎಂಬಲ್ಲಿ ಸೆ.29ರಂದು ರಾತ್ರಿ ವೇಳೆ ಕೋಳಿ ಅಂಕ ನಡೆಸುತ್ತಿದ್ದ 11 ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಸುಧೀರ್, ಭಾಸ್ಕರ, ಸುನೀಲ್, ಸಂತೋಷ್, ಚರಣ್ ಕುಮಾರ್, ಶ್ರೀಧರ ಶೆಟಿ, ರಘುನಾಥ ಪೂಜಾರಿ, ರಮೇಶ್ ಶೆಟ್ಟಿ, ಮಂಜುನಾಥ, ಪ್ರಜ್ವಲ್, ಸುಧೀರ್ ಪೂಜಾರಿ ಬಂಧಿತ ಆರೋಪಿಗಳು. ಉದಯ ಮತ್ತು ಸುದರ್ಶನ್ ಬಾಬು ಎಂಬವರು ಕೋಳಿ ಅಂಕ ನಡೆಸುತ್ತಿದ್ದರೆನ್ನಲಾಗಿದೆ.

ಬಂಧಿತರಿಂದ 19 ಕೋಳಿ ಹುಂಜಗಳನ್ನು ಹಾಗೂ 17,040ರೂ. ಹಾಗೂ 10 ಬಾಳುಗಳು ಹಾಗೂ ಸ್ಥಳದಲ್ಲಿದ್ದ ಒಟ್ಟು 25 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News