ನಿವೃತ್ತ ವಿದ್ಯಾಂಗ ಉಪನಿರ್ದೇಶಕರಿಗೆ ಸನ್ಮಾನ
Update: 2020-10-01 18:04 IST
ಉಡುಪಿ, ಅ.1: ಉಡುಪಿ ತುಳುಕೂಟದ ವತಿಯಿಂದ ವಯೋನಿವೃತ್ತಿ ಹೊಂದಿದ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ ಅವರನ್ನು ಉಡುಪಿಯ ಜಗನ್ನಾಥ ಸಭಾಭವದಲ್ಲಿ ಬುಧವಾರ ಸನ್ಮಾನಿಸಲಾಯಿತು.
ಉಡುಪಿ ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ, ಗೌರವಾಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸನ್ಮಾನ ನೆರವೇರಿಸಿದರು. ತುಳುಕೂಟದ ಉಪಾಧ್ಯಕ್ಷ ಮಹಮ್ಮದ್ ಮೌಲಾ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ವಿಶ್ವನಾಥ ಬಾಯರಿ, ಮನೋಹರ ಶೆಟ್ಟಿ, ಸರೋಜಾ ಆಚಾರ್ಯ, ವಿದ್ಯಾ, ಪ್ರಭಾಕರ ಭಂಡಾರಿ, ವಿ.ಕೆ.ಯಾದವ್, ದಯಾನಂದ ಡಿ., ಯು.ಜೆ. ದೇವಾಡಿಗ, ದಯಾನಂದ ಕೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.