ತಿಂಗಳೊಳಗೆ ನರ್ಮ್ ಬಸ್ ಆರಂಭಿಸದಿದ್ದರೆ ಹೋರಾಟ: ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ

Update: 2020-10-01 12:37 GMT

ಉಡುಪಿ, ಅ.1: ಉಡುಪಿ ಜಿಲ್ಲೆಯಲ್ಲಿ ನರ್ಮ್ ಬಸ್ ಸೇವೆಯನ್ನು ಅಕ್ಟೋಬರ್ ತಿಂಗಳೊಳಗೆ ಪುನರಾರಂಭಿಸದಿದ್ದರೆ ಇತರ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ತಿಳಿಸಿದ್ದಾರೆ.

ಉಡುಪಿ ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿದ್ದ ನರ್ಮ್ ಬಸ್‌ನ್ನು ಖಾಸಗಿ ಬಸ್ ಮಾಲಕರ ಲಾಬಿಗೆ ಮಣಿದು ಸ್ಥಗಿತಗೊಳಿಸಲಾಗಿದೆ. ಕೆಲವು ತಿಂಗಳು ಗಳಿಂದ ಉಡುಪಿ ಜಿಲ್ಲಾಡಳಿತವು ನರ್ಮ್ ಬಸ್ ಸೌಲಭ್ಯವನ್ನು ನಿಲ್ಲಿಸಿದೆ. ಈ ಬಸ್ ಸೌಲಭ್ಯವನ್ನು ಪುನರಾರಂಭಿಸುವಂತೆ ಹಲವಾರು ಸಂಘ ಸಂಸ್ಥೆಗಳು ಹಲವಾರು ಮನವಿ ನೀಡಿದರೂ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿರುವು ದಿಲ್ಲ. ಜಿಲ್ಲಾಡಳಿತದ ಈ ನಿಲುವು ಜಿಲ್ಲೆಯ ನಾಗರಿಕರಲ್ಲಿ ಅಸಮಾಧಾನ ವನ್ನುಂಟು ಮಾಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News