ಉತ್ತರ ಪ್ರದೇಶದಲ್ಲಿ ಯುವತಿಯ ಅತ್ಯಾಚಾರ, ಕೊಲೆ ಖಂಡಿಸಿ ದ.ಕ. ಜಿಲ್ಲಾ ಯುವಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Update: 2020-10-01 14:48 GMT

ಮಂಗಳೂರು, ಅ.1: ಉತ್ತರ ಪ್ರದೇಶದಲ್ಲಿ ಯುವತಿಯ ಮೇಲೆ ದೌರ್ಜನ್ಯ ನಡೆಸಿ , ಅತ್ಯಾಚಾರವೆಸಗಿದ ಬಳಿಕ ಆಕೆಯ ಶವವನ್ನು ಅಜ್ಞಾತ ಸ್ಥಳದಲ್ಲಿ ಸುಟ್ಟು ಹಾಕಿದ ಪ್ರಕರಣವನ್ನು ಖಂಡಿಸಿ, ಅತ್ಯಾಚಾರಿ ಕೊಲೆಗಡುಕರಿಗೆ ಶೀಘ್ರ ಮರಣ ದಂಡನೆಯನ್ನು ವಿಧಿಸಬೇಕೆಂದು ರಾಷ್ಟ್ರಪತಿ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವಕಾಂಗ್ರೆಸ್ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಎದುರು ಗುರುವಾರ ಮೊಂಬತ್ತಿ ಪ್ರತಿಭಟನೆ, ಪ್ರತಿಕ್ರತಿ ದಹನ ನಡೆಯಿತು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಕ್ಯಾಂಡಲ್ ಬೆಳಗಿಸಿ, ಬಳಿಕ ಠಾಕೂರು ಸಮುದಾಯಕ್ಕೆ ಸೇರಿದ ನಾಲ್ವರು ಆರೋಪಗಳನ್ನು ತಕ್ಷಣ ಗಲ್ಲಿಗೇರಿಸಬೇಕು, ಯೋಗಿ ಆದಿತ್ಯ ನಾಥ್ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಸತ್ಯವನ್ನು ಮುಚ್ಚಿಹಾಕಲು ನಿಮ್ಮಿಂದ ಸಾಧ್ಯವಿಲ್ಲ, ಘಟನಾ ಸ್ಥಳಕ್ಕೆ ತೆರಳಿದ ರಾಹುಲ್ ಗಾಂಧಿಯ  ತಡೆಯವ ಪ್ರಯತ್ನ ನಡೆದಿರುವುದನ್ನ ಯುವ ಕಾಂಗ್ರೆಸ್ ಖಂಡಿಸುತ್ತದೆ. ರಾಹುಲ್ ನೇತ್ರತ್ವದಲ್ಲಿ ನಡೆಯುವ ಪ್ರತಿಭಟನೆ ಹತ್ತಿಕ್ಕಲು ನಿಮ್ಮಿಂದ ಸಾಧ್ಯವಿಲ್ಲ, ಯುವ ಕಾಂಗ್ರೆಸ್ ಅವರಿಗೆ ಬೆಂಬಲಿಸಲಿದೆ. ಆದಿತ್ಯನಾಥ್ ರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದ್ದು ಬಿಜೆಪಿ  ಆಡಳಿತ ಶೀಘ್ರದಲ್ಲಿ ಅಂತ್ಯ ಕಾಣಲಿದೆ ಎಂದು ಮಿಥುನ್ ರೈ  ಹೇಳಿದರು‌.

ಮನಪಾ ಸದಸ್ಯ ಎ.ಸಿ.ವಿನಯ್ ರಾಜ್, ಮಾಜಿ ಸದಸ್ಯ ಪ್ರಕಾಶ್ ಸಾಲ್ಯಾನ್, ಮಹಮ್ಮದ್ ಕುಂಜತ್ತಬೈಲ್, ಜಿಲ್ಲಾ ಮಹಿಳಾ  ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News