ಅ.2ರಂದು ಸ್ಪೆಷಾಲಿಟಿ ಸರಕಾರಿ ಜಿಲ್ಲಾಸ್ಪತ್ರೆಗಾಗಿ ಉಪವಾಸ ಸತ್ಯಾಗ್ರಹ

Update: 2020-10-01 15:23 GMT

ಉಡುಪಿ, ಅ.1: ಉಡುಪಿಯಲ್ಲಿ ಸೂಪರ್ ಸ್ಪೆಷಾಲಿಟಿ ಸರಕಾರಿ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಿಸಲು ಕೂಡಲೇ ಹಣಕಾಸು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅ.2ರಂದು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ 12 ತಾಸುಗಳ ಉಪವಾಸ ಸತ್ಯಾಗ್ರಹವನ್ನು ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಹಮ್ಮಿಕೊಳ್ಳಲಾಗುವುದು ಎಂದು ಯುವಶಕ್ತಿ ಕರ್ನಾಟಕದ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಘೋಷಣೆಯಾದ 2 ದಶಕಗಳಲ್ಲಿ 11 ಮಂದಿ ಜಿಲ್ಲಾ ಉಸ್ತುವಾರಿ ಸಚಿವರುಗಳು, 16 ಜಿಲ್ಲಾಧಿಕಾರಿಗಳು, 19 ಮಂದಿ ಜಿಪಂ ಅಧ್ಯಕ್ಷರುಗಳು, 12 ಸಿಇಓಗಳು ಅಧಿಕಾರ ಅನುಭವಿಸಿದ್ದಾರೆ. ಆದರೆ ಮಾನವನ ಮೂಲ ಹಕ್ಕು ಅಡಿಯಲ್ಲಿ ಬರುವ ಜಿಲ್ಲಾ ಆರೋಗ್ಯ ಕೇಂದ್ರ ಉಡುಪಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆ ಮಾತ್ರ ಇಂದಿಗೂ ಕೂಡ ಸೋರು ತ್ತಲೇ ಇದೆ ಎಂದು ಟೀಕಿಸಿದರು.

ಜಿಲ್ಲಾಸ್ಪತ್ರೆ ಹೊಸ ಕಟ್ಟಡ ನಿರ್ಮಾಣಕ್ಕೆ 10 ಎಕರೆ ಜಾಗ ಮೀಸಲಿರಿಸ ಲಾಗಿದೆ. ಸರಕಾರಿ ವೈದ್ಯಕೀಯ ಕಾಲೇಜಿಗೆ ಬಳಸಬಹುದಾಗಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ 110 ಎಕರೆಯಲ್ಲಿ 25 ಎಕರೆಯನ್ನು ಸರಕಾರಿ ವೈದ್ಯಕೀಯ ಕಾಲೇಜಿಗೆ ಬಳಸುವ ಪ್ರಸ್ತಾವನೆ ಇದೆ. 2001ರಲ್ಲಿ ಈ ಆಸ್ಪತ್ರೆಯನ್ನು 200 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಸರಕಾರ ಹೇಳಿತ್ತು. 2016ರ ಸೆಪ್ಟೆಂಬರ್‌ನಲ್ಲಿ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ಆದೇಶ ಬಂದಿದೆ. ಆದರೆ ಜಿಲ್ಲಾಸ್ಪತ್ರೆಗೆ ಬೇಕಾದ ಕಟ್ಟಡ, ಯಂತ್ರೋಪಕರಣ ಗಳು, ಸಿಬಂದಿ ಇಲ್ಲದೆ ಅತಂತ್ರವಾಗಿಯೇ ಉಳಿದಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಮಿತಿ ಸದಸ್ಯ ಬೆಳ್ಕಳೆ ಶರತ್ ಶೆಟ್ಟಿ, ಹಬೀಬ್ ಉಡುಪಿ, ಅಜಯ್ ಪೂಜಾರಿ, ಇಮ್ರಾನ್ ಕರಂಬಳ್ಳಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News