ಉಡುಪಿ : ಕೋವಿಡ್ ಗೆ ಮೂವರು ಬಲಿ, 275 ಮಂದಿಗೆ ಕೊರೋನ ಪಾಸಿಟಿವ್

Update: 2020-10-01 15:35 GMT

ಉಡುಪಿ, ಅ.1: ರಾಜ್ಯ ಆರೋಗ್ಯ ಇಲಾಖೆ ಇಂದು ರಾತ್ರಿ ಪ್ರಕಟಿಸಿದ ಕೋವಿಡ್-19 ರಾಜ್ಯ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 275 ಪಾಸಿಟಿವ್ ಪ್ರಕರಣಗಳು ಗುರುವಾರ ವರದಿಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ದೃಢಪಟ್ಟವರ ಸಂಖ್ಯೆ 17,419ಕ್ಕೇರಿದೆ. ಅಲ್ಲದೇ ದಿನದಲ್ಲಿ 329 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಹೀಗೆ ಮನೆಗೆ ತೆರಳಿದರ ಒಟ್ಟು ಸಂಖ್ಯೆ 15,297ಕ್ಕೇರಿದೆ.

ಮೂರು ಬಲಿ:  ಜಿಲ್ಲೆಯಲ್ಲಿ ಸದ್ಯ 1972 ಸಕ್ರೀಯ ಕೋವಿಡ್ ಪ್ರಕರಣಗಳಿವೆ. ಗುರುವಾರ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಒಟ್ಟು ಮೂವರು ಬಲಿಯಾಗಿದ್ದು, ಇದರಿಂದ ಈವರೆಗೆ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 150ಕ್ಕೇರಿದೆ.

ಇಂದು ವರದಿಯಾದ ಜಿಲ್ಲೆಯ ಮೂವರು 46, 59 ಹಾಗೂ 75 ವರ್ಷ ಪ್ರಾಯದ ಪುರುಷರಾಗಿದ್ದು, ಅನ್ಯ ಸಮಸ್ಯೆಯೊಂದಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. 46 ಮತ್ತು 59 ವರ್ಷ ಪ್ರಾಯದವರು ಸೆ. 24ರಂದು ಮೃತಪಟ್ಟಿದ್ದರೆ, 75ರ ವೃದ್ಧರು ಸೆ.30ರಂದು ಮೃತರಾಗಿದ್ದಾರೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಮುಷ್ಕರ ಮುಂದುವರಿಕೆ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು ಹತ್ತನೇ ದಿನವನ್ನು ಪೂರ್ಣ ಗೊಳಿಸಿದೆ. ನಾಳೆಯಿಂದ ಅವರು ಜಿಲ್ಲಾ ಕೇಂದ್ರದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News