ಮಂಗಳೂರು: ಸುಶ್ಮಿತಾ ಆಚಾರ್‌ಗೆ ಏಶಿಯನ್ ಎಜುಕೇಶನ್ ಅವಾರ್ಡ್

Update: 2020-10-01 16:23 GMT

ಮಂಗಳೂರು, ಅ.1: ಶಿಕ್ಷಣ ಸಮುದಾಯಕ್ಕೆ ನೀಡಿರುವ ಕೊಡುಗೆಗಾಗಿ ನೀಡಲಾಗುವ‘ ಏಶಿಯನ್ ಎಜುಕೇಶನ್ ಅವಾರ್ಡ್’ನ್ನು ಮಂಗಳೂರಿನ ಬೋಳೂರು ಬಿ.ಸುಶ್ಮಿತಾ ಆಚಾರ್ ಪಡೆದಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಜರುಗಿದ ಏಶಿಯನ್ ಎಜುಕೇಶನ್ ಅವಾರ್ಡ್ ಆ್ಯಂಡ್ ವರ್ಚುವಲ್ ಕಾನ್ಫರೆನ್ಸ್-2020 ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಸುಶ್ಮಿತಾ ಅವರು ಬಂಟ್ವಾಳ ಮಾಧವ ಆಚಾರ್ಯ ಮತ್ತು ಶುಭಾ ದಂಪತಿಯ ಪುತ್ರಿ. ಚೆನ್ನೈನ ಕಿಂಗ್ಸ್ ಕಾರ್ನರ್ ಸ್ಟೋನ್ ಇಂಟರ್‌ ನ್ಯಾಷನಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಗಿ ಕಾರ್ಯನಿರ್ವಹಿಸಿದ್ದು, ನ್ಯಾಶನಲ್ ಎಜುಕೇಶನ್ ಪಾಲಿಸಿಯ ಅಂಬಾಸಿಡರ್ ಆಗಿಯೂ, ಕರ್ನಾಟಕ ಹಾಗೂ ತಮಿಳುನಾಡಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಅತಿಥಿ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಈಕೆ ತನ್ನ ಪ್ರೌಢ ಶಿಕ್ಷಣವನ್ನು ಮಂಗಳೂರಿನ ಅಮೃತ ವಿದ್ಯಾಲಯದಲ್ಲಿ, ಪ.ಪೂ. ಶಿಕ್ಷಣವನ್ನು ಶಾರದಾ ಪ.ಪೂ. ಕಾಲೇಜು, ಬಿ.ಕಾಂ. ಪದವಿಯನ್ನು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ, ಎಂ.ಕಾಂ.ನ್ನು ಕೆನರಾ ಕಾಲೇಜು ಹಾಗು ಎಂ.ಬಿ.ಎ. (Interdisciplinary) ಪದವಿಯನ್ನು ಎಸ್‌ಐಎಂಎಸ್‌ನಲ್ಲೂ ಪೂರ್ಣಗೊಳಿಸಿದ್ದಾರೆ.

ಪ್ರಸ್ತುತ ‘ಡಾಕ್ಟರೇಟ್ ಆಫ್ ಫಿಲಾಸಫಿ’ಯನ್ನು ಹಿಮಾಲಯನ್ ಯುನಿವರ್ಸಿಟಿ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಮುಂದುವರಿ ಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News