ಅ. 3: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-10-01 16:25 GMT

ಮಂಗಳೂರು, ಅ.1: ಕಾಟಿಪಳ್ಳದ 33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 5ಎಂವಿಎ ಶಕ್ತಿ ಪರಿವರ್ತಕವನ್ನು 12.5 ಎಂವಿಎ ಶಕ್ತಿ ಪರಿವರ್ತಕ ದಿಂದ ವೃದ್ಧಿಸುವ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಅ.3ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.

ಇದರಿಂದ ಕಾಟಿಪಳ್ಳ, ತಡಂಬೈಲ್, ಚೇಳಾರ್, ಕುಡ್ಸೆಂಪ್, ಸುರತ್ಕಲ್, ಕಾನ, ಕೃಷ್ಣಾಪುರ ಮತ್ತು ಕುತ್ತೆತ್ತೂರು ಫೀಡರ್‌ಗಳ ತಡಂಬೈಲ್, ಮುಕ್ಕ, ಸಸಿಹಿತ್ಲು, ಚೇಳಾರ್, ಮಧ್ಯ, ಮುಂಚೂರು, ಕುಡ್ಸೆಂಪ್, ಪೆಡ್ಡಿಯಂಗಡಿ, ಕುತ್ತೆತ್ತೂರು, ಸೂರಿಂಜೆ, ರಾಜೀವ್ ನಗರ, ಸುರತ್ಕಲ್, ದೇಲಂತಬೆಟ್ಟು, ಕಾಟಿಪಳ್ಳ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, 9ನೇ ಬ್ಲಾಕ್, ಕೃಷ್ಣಾಪುರ, ಪಡ್ರೆ, ಕೋಟೆ, ಆದರ್ಶನಗರ, ಶಿಬರೂರು, ಚೊಕ್ಕಬೆಟ್ಟು, ಕಾನ, ಕಟ್ಲ, ಎನ್‌ಐಟಿಕೆ, ಬಿಎಎಸ್‌ಎಫ್, ಎಚ್‌ಪಿಸಿಎಲ್, ಸ್ಟೀಲ್ ಬ್ಯಾರೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ನೆಹರೂ ಮೈದಾನ: ಅ.3ರಂದು ಬೆಳಗ್ಗೆ 9:30ರಿಂದ ಸಂಜೆ 4:30ರವರೆಗೆ 33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಮುತ್ತಪ್ಪ ಟೆಂಪಲ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಇದರಿಂದ ರೈಲ್ವೆ ಸ್ಟೇಷನ್ ರೋಡ್, ಪೊಲೀಸ್ ಲೇನ್, ದೂಮಪ್ಪ ಕಂಪೌಂಡ್, ಕೇರಳ ಸಮಾಜ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News