×
Ad

ಡಿಎಲ್, ಆರ್‌ಸಿ ಬೇಕಾಗಿಲ್ಲ; ಡಿಜಿಟಲ್ ಪ್ರತಿ ಸಾಕು

Update: 2020-10-01 22:35 IST

ಹೊಸದಿಲ್ಲಿ, ಅ.1: ನೂತನ ಮೋಟಾರು ವಾಹನ ಕಾಯ್ದೆ ಗುರುವಾರದಿಂದ ಅಸ್ತಿತ್ವಕ್ಕೆ ಬಂದಿದ್ದು, ವಾಹನ ಚಾಲಕರು ಚಾಲನಾ ಪರವಾನಿಗೆ (ಡಿಎಲ್), ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್‌ಸಿ) ಹಾಗೂ ಇನ್ಸೂರೆನ್ಸ್‌ಗಳ ಬದಲಿಗೆ ಇ-ಕಾಪಿಗಳನ್ನು ತೋರಿಸಬಹುದಾಗಿದೆ.

ವಾಹನ ಚಾಲಕರು ಡಿಎಲ್, ಆರ್‌ಸಿ ಹಾಗೂ ಇನ್ಶೂರೆನ್ಸ್‌ಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವ ಅಗತ್ಯ ಇಲ್ಲ. ಪರಿಶೀಲನೆ ಸಂದರ್ಭ ಡಿಜಿಟಲ್ ಪ್ರತಿಗಳನ್ನು ತೋರಿಸಿದರೆ ಸಾಕು. ಕೇಂದ್ರ ಸರಕಾರದ ಡಿಜಿ ಲಾಕರ್ ಅಥವಾ ಎಂ-ಪರಿವನ್‌ನಂತಹ ಪೋರ್ಟಲ್‌ಗಳಿಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಂಡು, ಅಗತ್ಯವಾದಲ್ಲಿ ಡಿಜಿಟಲ್ ಪ್ರತಿಯನ್ನು ತೋರಿಸಬಹುದಾಗಿದೆ.

ಇನ್ನು ಮೋಟಾರು ವಾಹನಗಳ ನಿಯಮಗಳಿಗೆ ಇತ್ತೀಚೆಗೆ ತರಲಾಗಿರುವ ತಿದ್ದುಪಡಿ ಅನ್ವಯ ವಾಹನ ಚಾಲನೆ ಮಾಡುವ ಸಂದರ್ಭ ಮಾರ್ಗಸೂಚಿಗಾಗಿ ಮಾತ್ರ ಮೊಬೈಲ್ ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News