ಸಾಸ್ತಾನದಲ್ಲಿ ನಿರ್ಮಲ ಪರಿಸರ ಅಭಿಯಾನ
Update: 2020-10-02 19:55 IST
ಬ್ರಹ್ಮಾವರ, ಅ.2: ಗಾಂಧಿ ಜಯಂತಿಯ ಪ್ರಯುಕ್ತ ಕೆಥೊಲಿಕ್ ಸಭಾ ಸಂತ ಅಂತೋನಿ ಘಟಕ ಸಾಸ್ತಾನ, ಐಸಿವೈಎಂ, ವೈಸಿಎಸ್ ಹಾಗೂ ಕೆಥೊಲಿಕ್ ಸ್ತ್ರೀ ಸಂಘಟನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ಬಳಿ ಶುಕ್ರವಾರ ನಿರ್ಮಲ ಪರಿಸರ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು.
ಕೆಥೊಲಿಕ್ ಸಭಾ ಸಾಸ್ತಾನ ಘಟಕ ಅಧ್ಯಕ್ಷೆ ಸಿಂತಿಯಾ ಡಿಸೋಜ, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಸೋಫಿಯಾ ಆಲ್ಮೇಡಾ, ಐಸಿವೈಎಂ ಅಧ್ಯಕ್ಷ ರಿತೇಶ್ ಡಿಸೋಜ, ವೈಸಿಎಸ್ ಅಧ್ಯಕ್ಷ ತೋಮಸ್ ಡಿಸೋಜ, ಪದಾಧಿಕಾರಿ ಗಳಾದ ಲೂಯಿಸ್ ಮ್ಯಾಕ್ಷಿಮ್ ಡಿಸೋಜ, ಲೂಯಿಸ್ ಡಿಸೋಜ, ಜೊಸೇಫ್ ಡಿಸೋಜ, ಹೆನ್ರಿ ಲೂವಿಸ್, ವೀರಾ ಪಿಂಟೊ, ಫ್ಲೇವಿ ಡಿಸೋಜ, ಪ್ರೀತಿ ಪಿಂಟೊ, ರೋನಾಲ್ಡ್ ಪಿಂಟೊ, ಅನಿತಾ ಡಿಆಲ್ಮೇಡಾ, ಲಿಯೋ ಡಿಆಲ್ಮೇಡಾ ಮೊದಲಾದವರು ಉಪಸ್ಥಿತರಿದ್ದರು.