ದೇಶದ ಸಂವಿಧಾನ -ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿವೆ: ಶ್ರೀರಾಮ ದಿವಾಣ

Update: 2020-10-02 14:27 GMT

ಮಲ್ಪೆ, ಅ. 2: ದೇಶ ಇಂದು ತಲ್ಲಣದ ಗೂಡಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿವೆ. ದಲಿತರು ಆತಂಕದಲ್ಲಿ ಬದುಕು ವಂತಾಗಿದೆ. ಸಾಮಾಜಿಕ ನ್ಯಾಯ ಕನ್ನಡಿಯ ಗಂಟಾಗಿದೆ ಎಂದು ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ ಹೇಳಿದ್ದಾರೆ.

ಮಲ್ಪೆ ಲಯನ್ಸ್ ಸೇವಾ ಭವನದಲ್ಲಿ ಗುರುವಾರ ನಡೆದ ಅಂಬೇಡ್ಕರ್ ಯುವ ಸೇನೆಯ ಮಲ್ಪೆನಗರಶಾಖೆಯನ್ನು ಮತ್ತು ಪದಗ್ರಹಣದ ಕಾರ್ಯ ಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದಲಿತ ಮುಖಂಡ ಲೋಕೆಶ್ ಪಡುಬಿದ್ರಿ ಮಾತನಾಡಿ, ದಲಿತ ಯುವಕರನ್ನು ದುಶ್ಚಟಗಳಿಂದ ಸರಿದಾರಿಗೆ ತರುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ದಲಿತ ಹೆಣ್ಣು ಮಕ್ಕಳು ಪೋಟೊ ಹಾಕದಂತೆ ಪೋಷಕರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭಾ ಸದಸ್ಯ ಯೋಗಿಶ್ ವಿ. ಸಾಲ್ಯಾನ್, ವಕೀಲ ಹಾಗೂ ದಲಿತ ಮುಖಂಡ ಮಂಜುನಾಥ ಗಿಳಿಯಾರು ಮಾತನಾಡಿದರು. ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುಸೇನೆಯ ಅಧ್ಯಕ್ಷ ಹರೀಶ್ ಸಲ್ಯಾನ್ ವಹಿಸಿದ್ದರು.

ವೇದಿಕೆಯಲ್ಲಿ ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ದಲಿತ ರಾಜಕೀಯ ನಾಯಕ ಗಣೇಶ್ ನೆರ್ಗಿ, ಇಂಜಿನಿಯರ್ ರಮೇಶ್ ಪಾಲ್ ಉಪಸ್ಥಿತರಿದ್ದರು. ದಲಿತ ಚಿಂತಕ ಜಯನ್ ಮಲ್ಪೆಪ್ರಾಸ್ತಾವಿಕವಾಗಿ ಮಾತನಾ ಡಿದರು. ಸುಮಿತ್ ನೆರ್ಗಿ ಸ್ವಾಗತಿಸಿದರು. ಭದವಾನ್ ಮಲ್ಪೆ ವಂದಿಸಿದರು. ಗೀತಾ ಮತ್ತು ಜೀವನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News