×
Ad

ಮೂಡುಬಿದ್ರೆ: ಅಬ್ದುಲ್ ‌ಲತೀಫ್ ಸ್ಮರಣಾರ್ಥ ರಕ್ತದಾನ ಶಿಬಿರ

Update: 2020-10-02 21:59 IST

ಮೂಡುಬಿದ್ರೆ: ಮನುಷ್ಯ ಮನುಷ್ಯನನ್ನು ಅರ್ಥೈಸದೇ   ಬದುಕುವ ಜನರ ಮಧ್ಯೆ ಮನುಷ್ಯ ರಾಗಿ ಇರಲು ಸಾಧ್ಯವಿಲ್ಲ .ಕಷ್ಟ  ಸುಖದಲ್ಲಿ ಭಾಗಿಯಾಗಿ  ಬದುಕುವುದೆ ನಿಜವಾದ ಬದುಕು ಎಂದು  ಮೂಳೂರು ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಮೇನೆಜರ್ ಯು.ಕೆ.ಮುಸ್ತಫ ಸಹದಿಹೇಳಿದರು.

ಅವರು ಇಂದು 151ನೆ ಗಾಂಧಿ ಜಯಂತಿ ಪ್ರಯುಕ್ತ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಮಂಗಳೂರು ಇದರ ಸಹಕಾರದಲ್ಲಿ ಮರ್ಹೂಂ ಅಬ್ದುಲ್ ಲತೀಫ್ ಮೂಡಬಿದಿರೆ ಸ್ಮರಣಾರ್ಥ 69ನೆ ಬ್ರಹತ್ ಸಾರ್ವಜನಿಕ ರಕ್ತ ದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾರಂಭದ ಅದ್ಯಕ್ಷತೆಯನ್ನು ತೋಡಾರ್ ಜುಮಾ ಮಸೀದಿ ಅದ್ಯಕ್ಷರಾದ ಉಸ್ಮಾನ್ ಹಾಜಿ ಏರ್ ಇಂಡಿಯಾ ವಹಿಸಿದ್ದರು. ವೇದಿಕೆಯಲ್ಲಿ ಸಿ.ಎಚ್ ಮೆಡಿಕಲ್ ಮಾಲಕರಾದ ಅಬ್ದುಲ್ ಗಫೂರ್, ನಂಡೆ ಪೆಂಞಲ್ ಅಭಿಯಾನ ಅದ್ಯಕ್ಷರಾದ ನೌಶಾದ್ ಹಾಜಿ ಸೂರಲ್ಪಾಡಿ. ಸೌಹಾರ್ದ ಮೂಡಬಿದ್ರೆ ಅದ್ಯಕ್ಷರಾದ ಅಬುಲ್ ಆಲಾ ಪುತ್ತಿಗೆ. ಬದ್ರಿಯಾ ಜುಮಾ ಮಸೀದಿ ಮೂಡಬಿದಿರೆ ಅದ್ಯಕ್ಷರಾದ ಅಬ್ದುಲ್ ರಹಿಮಾನ್, ಖತೀಬ್ ಮಹಮ್ಮದ್ ಮುಸ್ತಫ ಯಮಾನಿ, ಹಿದಾಯ ಫೌಂಡೇಶನ್ ಸದಸ್ಯರಾದ  ಮಹಮ್ಮದ್ ಮೂಡಬಿದಿರೆ,  ಭಾರತೀಯ ರೆಡ್‌ಕ್ರಾಸ್ ರಕ್ತನಿಧಿ  ಸಂಚಾಲಕರಾದ ಪ್ರವೀಣ್. ಬ್ಲಡ್ ಹೆಲ್ಪ್ ಕೇರ್ ಅಧ್ಯಕ್ಷರಾದ ನಝೀರ್ ಹುಸೈನ್. ಬ್ಲಡ್ ಹೆಲ್ಪ್ ಕೇರ್  ಸಂಚಾಲಕರಾದ ಶಂಶುದ್ದೀನ್ ಬಲ್ಕುಂಜೆ ಉಪಸ್ಥಿತರಿದ್ದರು.

ಮರ್ಹೂಂ ಅಬ್ದುಲ್ ಲತೀಫ್ ಸಹೋದರ ಮಹಮ್ಮದ್  ಶಿಹಾಬುದ್ದೀನ್ ರವರಿಗೆ ಬ್ಲಡ್ ಹೆಲ್ಪ್ ಕೇರ್  ಸಂಸ್ಥೆಯಿಂದ ಸ್ಮರಣಿಕೆ ಹಸ್ತಾಂತರಿ ಸಲಾಯಿತು.  ಅಬ್ದುಲ್ ಹಮೀದ್ ಗೋಳ್ತಮಜಲ್ ಸ್ವಾಗತಿಸಿದರು. ಸತ್ತಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News